ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಕಾಂಗ್ರೆಸ್ ಹಿಂದುತ್ವವನ್ನು ತುಳಿಯುವ ಕೆಲಸ ಮಾಡಿದರೆ, ಬಿಜೆಪಿ ಹಿಂದೂತ್ವ ಪ್ರತಿಪಾದಿಸುವ ನಾಯಕರನ್ನು ಕಡೆಗಣಿಸುವ ಕೆಲಸ ಮಾಡುತ್ತಿದೆ. ರಾಷ್ಟ್ರವಾದದ ಬದಲು ಜಾತಿವಾದ ಆರಂಭವಾಗಿದೆ.
ಅವರು ರಾಷ್ಟ್ರಭಕ್ತ ಬಳಗದ ವತಿಯಿಂದ ಬುಧವಾರ ಕಿರಿಮಂಜೇಶ್ವರದಲ್ಲಿ ಆಯೋಜಿಸಲಾದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿವಾದಕ್ಕೆ ಯಡಿಯುರಪ್ಪನವರ ಮಗ ಬಲಿಯಾಗುತ್ತಾರೆ. ಜನ ನೋಡುತ್ತಿದ್ದಾರೆ. ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ. ಬಿಜೆಪಿ ಕಾರ್ಯಕರ್ತರ ಧ್ವನಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದು, ಗೆಲ್ಲವ ವಿಶ್ವಾಸವಿದೆ. ಗೋಹತ್ಯೆ ಮಾಡುತ್ತಿದ್ದಾರೆ, ಪ್ರಶ್ನಿಸುವ ಯುವಕರನ್ನು ಜೈಲಿಗಟ್ಟುತ್ತಿದ್ದಾರೆ. ಗೋಕಳ್ಳನನ್ನು ಬಂಧಿಸುವ ತಾಕತ್ತು ರಾಜ್ಯ ಸರಕಾರಕ್ಕಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಹಿಂದುತ್ವದ ಕಾರ್ಯಕರ್ತರನ್ನು ಮುಟ್ಟಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಜಾತಿ ರಾಜಕಾರಣ ಮುಂದುವರಿದರೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮ ಆಗುತ್ತೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಮಂತ್ರಿ ಮಾಡುವುದಾಗಿ ಮೋಸ ಮಾಡಿದ ಶಾಪ ಯಡಿಯೂರಪ್ಪನವರ ಮಗನಿಗೆ ತಟ್ಟಲಿದೆ.ಕರಾವಳಿಯ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಕಟಿಬದ್ಧವಾಗಿದ್ದೇನೆ ಎಂದರು.
ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರಾದ ನಾಗರಾಜ ಖಾರ್ವಿ, ಸುರೇಶ ಪೂಜಾರಿ, ಶೈಲಜಾ, ಕೋಮಲ, ಮಂಗಳ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಮೇಯರ್ ಸುವರ್ಣ ಶಂಕರ್, ಮಾಜಿ ಸದಸ್ಯೆ ಸೀತಾಲಕ್ಷ್ಮೀ, ಆರತಿ ಆಮಾಪ್ರಕಾಶ್, ರಾಷ್ಟ್ರಭಕ್ತ ಬಳಗದ ಉಸ್ತುವಾರಿಗಳಾದ ಕೃಷ್ಣ ಬಿಜೂರು, ನಿತ್ಯಾನಂದ, ಉಮೇಶ್ ಬಿಜೂರು, ಜಗನ್ನಾಥ ಖಾರ್ವಿ, ನಾಗೇಶ್ ಪಾಟೇಲ್, ವೆಂಕಟೇಶ್ ಬಾಡ, ವಿನೋದ್, ಅಭಿನಂದನ್, ಸಂತೋಷ್ ತಲ್ಲೂರು, ರಘುಪತಿ ಮೊದಲಾದವರು ಉಪಸ್ಥಿತರಿದ್ದರು. ಮಹೇಶ್ ನಾವುಂದ ಕಾರ್ಯಕ್ರಮ ನಿರೂಪಿಸಿದರು.