ನ.1ರಂದು ‘ಪಂಚವರ್ಣ ರಾಜ್ಯೋತ್ಸವ’ ಪ್ರಶಸ್ತಿ ಪ್ರದಾನ

0
689

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕೋಟದ ಪಂಚವರ್ಣಯುವಕ ಮಂಡಲದ ಆಶ್ರಯದಲ್ಲಿ 24ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕೋಟದ ವರುಣತೀರ್ಥ ಕೆರೆ ಸಮೀಪ ಅಮೃತೇಶ್ವರಿ ಪಾರ್ಕಿಂಗ್ ಸ್ಥಳದಲ್ಲಿ ನಾಳೆ ನ.1 ರಂದು ನಡೆಯಲಿದ್ದು ಅದರಂತೆ ಪೂರ್ವಾಹ್ನ ಸಂಘದ ಕಛೇರಿ ಎದುರು ಧ್ವಜಾರೋಹವನ್ನು ಕೋಟದ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ ನೆರವೆರಿಸಲಿದ್ದಾರೆ.

ಸಂಜೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ಹೆಸರಾಂತ ಸಮಾಜ ಸೇವಕ ರವಿ ಕಟಪಾಡಿ ಇವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಗೈಯಲ್ಲಿದ್ದಾರೆ.

Click Here

Click Here

ಅದರಂತೆ ಪಂಚವರ್ಣ ವಿಶೇಷ ಪುರಸ್ಕಾರವನ್ನು ಸ್ಥಳೀಯ ಯುವಕ ಮಂಡಲವಾದ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಇವರು ಪಡೆದುಕೊಳ್ಳಲಿದ್ದಾರೆ. ಸ್ಥಳೀಯ ಮೂವರು ಸಾಧಕರಿಗೆ ವಿಶೇಷ ಅಭಿನಂದನೆ. ಖೇಲೋ ಇಂಡಿಯಾ ಆಯ್ಕೆಯಾದ ಸಾತ್ವಿಕ್ ಕೊಮೆ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ.
ಉದಯ ಪೂಜಾರಿ ಸ್ಮರಣಾರ್ಥ ಆರೋಗ್ಯ ನಿಧಿ ವಿತರಣೆ,ಅಶಕ್ತರಿಗೆ ಸಹಾಯಹಸ್ತ,ಮಣಿಪಾಲದ ಸರಳಬೆಟ್ಟು ಅನಾಥಾಶ್ರಕ್ಕೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ಹಸ್ತಾಂತರಿಸಲಿದೆ.ಸಾಂಸ್ಕ್ರತಿಕ ಕಾರ್ಯಕ್ರಮದ ಸಲುವಾಗಿ ಈಶಲಾಸ್ಯ ತಂಡ ಚಿತ್ರಪಾಡಿ ಇವರಿಂದ ನೃತ್ಯ ಕಾರ್ಯಕ್ರಮ,ರಾತ್ರಿ 9.30ಕ್ಕೆ ಜಿಲ್ಲೆಯ ಪ್ರಸಿದ್ಧ ಯಕ್ಷತಂಡದಿಂದ ಚಂದ್ರಾವಳಿ ವಿಲಾಸ ಯಕ್ಷಗಾನ ಪ್ರದರ್ಶನ ಜರಗಲಿಕ್ಕಿದೆ.ಎಂದು ಪಂಚವರ್ಣ ಯುವಕ ಮಂಡದ ಅಧ್ಯಕ್ಷ ಅಮೃತ್ ಜೋಗಿ ,ಕಾರ್ಯದರ್ಶಿ ನಿತೀನ್ ಕುಮಾರ್ ಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here