ಶಿರೂರು ಟೋಲ್ ಪ್ಲಾಝಾ: ಕನ್ನಡ ರಾಜ್ಯೋತ್ಸವ ಆಚರಣೆ

0
729

ಕುಂದಾಪುರ ಮಿರರ್ ಸುದ್ದಿ…
ಬೈಂದೂರು:
ತಾಲೂಕಿನ ಟೋಲ್ ಪ್ಲಾಝಾ ಶಿರೂರು ಇದರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಬೈಂದೂರು ತಾಲೂಕು ತಹಶೀಲ್ದಾರ್ ಶೋಭಾಲಕ್ಷ್ಮೀ ಕನ್ನಡಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ. ನಾಡಿನ ಶ್ರೀಮಂತ ಕಲೆ ಸಾಹಿತ್ಯ ಪರಂಪರೆಯಿಂದ ಜಗತ್ತಿನಲ್ಲಿ ನಮ್ಮ ನಾಡಿಗೆ ವಿಶೇಷ ಶ್ರೇಷ್ಠತೆ ನೀಡಿದೆ. ಕನ್ನಡ ಮನಸ್ಸು ಒಗ್ಗೂಡಿ ನೆಲ-ಜಲ ರಕ್ಷಣೆ ಮೂಲಕ ಕನ್ನಡ ಸೇವೆ ಮಾಡೋಣ ಎಂದರು.


ಜಿ.ಪಂ.ಮಾಜಿ ಸದಸ್ಯ ಸುರೇಶ ಬಟ್ವಾಡಿ, ತಾ.ಪಂ.ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಟೋಲ್ ವ್ಯವಸ್ಥಾಪಕ ಬೋಸ್ಲೆ, ದೇವರಾಜ್ ಮೇಸ್ತ, ದೀಪಕ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Click Here

Click Here

ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿ, ತಾ.ಪಂ.ಮಾಜಿ.ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ವಂದಿಸಿದರು.

Click Here

LEAVE A REPLY

Please enter your comment!
Please enter your name here