ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಸಮುದ್ಯತಾ ಗ್ರೂಪ್ಸ್ ಕೋಟ ಇವರುಗಳ ಸಹಯೋಗದೊಂದಿಗೆ ಪ್ರತಿವರ್ಷ ಜೂನ್‍ನಿಂದ ಅಗಸ್ಟ್ ವರೆಗೆ ನಡೆಯುವ ಪರಿಸರ ಸ್ನೇಹಿ ಹಸಿರು ಅಭಿಯಾನಕ್ಕೆ ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರ, ಗೀತಾನಂದ ಫೌಂಡೇಶನ್ ಮಣೂರು ಉಚಿತ ಗಿಡ ವಿತರಿಸುತ್ತಿದ್ದು ಇದರ ಭಾಗವಾಗಿ ಬ್ರಹ್ಮಾವರ ಸುವರ್ಣ ಎಂಟರ್ಪ್ರೈಸ್ ಮಾಲಿಕ ಮಧುಸೂದನ್ ಹೇರೂರು ಒಂದು ಸಾವಿರ ಅಧಿಕ ಪಂಚವರ್ಣ ಸಂಸ್ಥೆಗೆ ನೀಡಲಿದ್ದು ಸಾಂಕೇತಿಕವಾಗಿ 150ಗಿಡಗಳನ್ನು ಮಂಗಳವಾರ ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಧುಸೂದನ್ ಹೇರೂರು ಪರಿರದ ಬಗ್ಗೆ ಅಪಾರ ಕಾಳಜಿ ಇರುವ ನಿಮ್ಮ ಸಂಸ್ಥೆ ಸಾಕಷ್ಟು ಗಿಡಗಳನ್ನು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಭಾಗಗಳಲ್ಲಿ ನೆಟ್ಟು ಪೂಷಿಸುವ ಕೆಲಸ ಮಾಡುತ್ತಿದ್ದಿರಿ ಅದೇ ರೀತಿ ನಮ್ಮ ಸಂಸ್ಥೆ ಉಚಿತವಾಗಿ 10ಸಾವಿರ ಅಧಿಕ ಗಿಡವನ್ನು ಜಯಂಟ್ಸ್ ಕ್ಲಬ್ ಬ್ರಹ್ಮಾವರ, ಭಾರತೀಯ ಜನೌಷಧ ಕೇಂದ್ರ ಬ್ರಹ್ಮಾವರ ಇವರಗಳ ಮೂಲ ಕಹಸ್ತಾಂತರಿಸಲಿದ್ದೇವೆ ಪರಿಸರ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು ಆಗಮಾತ್ರ ಸಮೃದ್ಧ ಪರಿಸರ ಕಟ್ಟಲು ಸಾಧ್ಯವಿದೆ ಎಂದರು.
ಈ ವೇಳೆ ಪಂಚವರ್ಣ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಸುಧೀಂದ್ರ ಜೋಗಿ, ಸದಸ್ಯರಾದ ಕಾರ್ತಿಕ್ ಎನ್, ಮಹೇಶ್ ಬೆಳಗಾವಿ, ಸುಧೀರ್ ಪೂಜಾರಿ ಇದ್ದರು.