ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಹಿ.ಪ್ರಾ.ಶಾಲೆ(ದೂಳಂಗಡಿಶಾಲೆ) ಹಂಗಾರಕಟ್ಟೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಅಚರಿಸಲಾಯಿತು.
ಪ್ರಾರಂಭೋತ್ಸವದ ಅಂಗವಾಗಿ ಶಾಲೆಯನ್ನು ತಳಿರುತೋರಣದಿಂದ ಶೃಂಗರಿಸಲಾಯಿತು.
ಶಾಲಾ ಅವರಣದಲ್ಲಿ ಮೆರವಣಿಗೆಯಯಲ್ಲಿ ಅಗಮಿಸಿದ
ಮಕ್ಕಳನ್ನು ಆರತಿ ಮೂಲಕ ಸ್ವಾಗತಿಸಲಾಯಿತು.
ನಂತರ ನಡೆದ ಪ್ರಾರಂಬೋತ್ಸವ ಸಮಾರಂಭದಲ್ಲಿ ವಿದ್ಯಾಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾಯಕ್ರಮ ನಡೆಯಿತು.
ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಆಧ್ಯಕ್ಷೆ ರೇಖಾ ಉಡುಪ, ನಿವೃತ್ತ ಮುಖ್ಯ ಶಿಕ್ಷಕಿ ಸೇಸು ಮಕ್ಕಳಿಗೆ ಪುಸ್ತಕ ವಿತರಿಸಿದರು.
ಮುಖ್ಯ ಶಿಕ್ಷಕಿ ಪ್ರೆಸಿಲ್ಲಾ ಮೆಟಿಲ್ಡಾ ನೊರೊನಾ ಸ್ವಾಗತಿಸಿದರು. ಶಿಕ್ಷಕಿ ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ವಾಷಿಕ ಕ್ರೀಯಾ ಯೋಜನೆಗಳ ಬಗ್ಗೆ ಮಾತನಾಡಿದರು.
ಗೌರವ ಶಿಕ್ಷಕಿ ಯಶೋದಾ ವಂದಿಸಿದರು. ಕಾಯಕ್ರಮದಲ್ಲಿ ಶಿಕ್ಷಕಿಯರಾದ ಲವೀನಾ, ರಮ್ಯಾ ಶಾಲಾಭಿವೃದ್ಧಿ ಸಮಿತಿಯ
ಸದಸ್ಯರು, ಪೋಷಕರು ಉಪಸ್ಥಿತರಿದ್ದರು.