ಕುಂದಾಪುರ ಮಿರರ್ ಸುದ್ದಿ…
ವಂಡ್ಸೆ: ಸ.ಮಾ.ಹಿ.ಪ್ರಾ. ಶಾಲೆ ವಂಡ್ಸೆ ಇಲ್ಲಿ ಶಾಲಾ ಪ್ರಾರಂಭೋತ್ಸವ ವಿಶಿಷ್ಟವಾಗಿ ಜರುಗಿತು. ಚಪ್ಪಾಳೆಯೊಂದಿಗೆ ಮಕ್ಕಳನ್ನು ಶಾಲಾವರಣಕ್ಕೆ ಸ್ವಾಗತಿಸುವುದರೊಂದಿಗೆ ಪ್ರಾರಂಭೋತ್ಸವ ಆರಂಭಗೊಂಡಿತು. ಆ ನಂತರ ಮಕ್ಕಳಿಗಾಗಿ ಶಿಕ್ಷಕರು ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಪ್ರಾರಂಭೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಲೇಖಕಿ, ರೇಖಾಚಿತ್ರ ಕಲಾವಿದೆ ಡಾ.ಹೂರ್ ಬಾನು ಭಾಗವಹಿಸಿದ್ದರು. ಇವರು ಮಕ್ಕಳೊಂದಿಗೆ ಸಂವಾದ ಮತ್ತು ಚಿತ್ರಕಲಾ ತರಬೇತಿಯನ್ನು ನಡೆಸಿಕೊಟ್ಟರು. ಮಕ್ಕಳಿಗಾಗಿ ಹಲವಾರು ಪುಸ್ತಕಗಳನ್ನು ರಚಿಸಿರುವುದಲ್ಲದೇ, ತಾನೇ ಬರೆದಿರುವ”ಗಣಿತ ಕಲಿತ ಗಿಣಿ” ಪುಸ್ತಕದ ಚಿತ್ರಕಲೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ಹೂರ್ ಬಾನು ರವರ ಮಾರ್ಗದರ್ಶನ ಮಕ್ಕಳಿಗೆ ವಿಶೇಷ ಪ್ರೇರಣೆ ನೀಡಿತು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಡಾ.ಪೂರ್ಣಿಮಾ ಟಿ., ಉಪಾಧ್ಯಕ್ಷ ರಾಜು ಹಾಗೂ ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.