ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಸಂಸತ್ತ್‌ ಮಾದರಿ ಚುನಾವಣೆ ಇವಿಎಂ ಆ್ಯಪ್ (EVM App)ಮೂಲಕ ಮತ ಚಲಾಯಿದ ವಿದ್ಯಾರ್ಥಿಗಳು

0
310

ಶಾಲಾ ನಾಯಕಿಯಾಗಿ ಆದ್ಯಾ ಪಿ ಮತ್ತು ಉಪನಾಯಕನಾಗಿ ಎಸ್‌ ವಿ ಧನುಷ್ ಆಯ್ಕೆ

ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಆಯ್ಕೆಗಾಗಿ ಸಂಸತ್ತ್‌ ಮಾದರಿ ಚುನಾವಣೆಯನ್ನು ನಡೆಸಲಾಯಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರೀಶೀಲನೆ, ಹಿಂಪಡೆಯುವುದು, ಚಿಹ್ನೆ ನೀಡುವಿಕೆ, ಪ್ರಚಾರ ಹೀಗೆ ಎಲ್ಲಾ ಹಂತಗಳ ನಂತರ ಮಕ್ಕಳಿಗೆ ಇವಿಎಂ ಆ್ಯಪ್(EVM App) ಮೂಲಕ ಮೊಬೈಲ್‌ ನಲ್ಲಿ ಮತಚಲಾಯಿಸಲು ಅವಕಾಶ ನೀಲಾಯಿತು. ಮಕ್ಕಳು ತುಂಬಾ ಸಂಭ್ರಮದಿಂದ ಮತ ಚಲಾಯಿಸಿದರು. ನೋಟಾ(NOTA)ಕ್ಕೂ ಅವಕಾಶ ನೀಡಲಾಗಿತ್ತು.

Click Here

ನಾಯಕನ ಸ್ಥಾನಕ್ಕೆ ಮೂವರು ವಿದ್ಯಾರ್ಥಿಗಳು ಮತ್ತು ಉಪನಾಯಕನ ಸ್ಥಾನಕ್ಕೆ ಮೂವರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಶಾಲಾ ನಾಯಕಿಯಾಗಿ ಆದ್ಯಾ ಪಿ 7ನೇ ತರಗತಿ, ಉಪನಾಯಕನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್‌ ವಿ ಧನುಷ್‌ 6ನೇ ತರಗತಿ ಆಯ್ಕೆಯಾದರು.

ಚುನಾವಣೆ ಅಧಿಕಾರಿಯಾಗಿ ಸಹಶಿಕ್ಷಕ ಆನಂದ ಕುಲಾಲ ಕರ್ತವ್ಯ ನಿರ್ವಹಿಸಿದರೆ,ಸಹ ಶಿಕ್ಷಕಿ ಸಂಧ್ಯಾ ಕೆ. ಮತ್ತು ಗೌರವ ಶಿಕ್ಷಕಿಯರಾದ ಪ್ರಮೀಳಾ, ವಿಶಲಾಕ್ಷಿ, ವೈಶಾಲಿ ಶೆಟ್ಟಿ ಮತ್ತು ನಯನ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಜೂ.10ರಂದು ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ. ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

Click Here

LEAVE A REPLY

Please enter your comment!
Please enter your name here