ಕುಂದಾಪುರ :ಆಲೂರು ಶಾಲೆಯ ನಿತೇಶ್ ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

0
53

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಜುಲೈ 23ರಿಂದ 25ರ ತನಕ ತಮಿಳುನಾಡಿನ ಚೆನ್ನೈಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇಲ್ಲಿನ ವಿದ್ಯಾರ್ಥಿ ನಿತೇಶ್ ಜೆ ಭಾಗವಹಿಸಲಿದ್ದಾನೆ.

Click Here

Click Here

ನಿತೇಶ್ ಜೆ ಶಾಲಾ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಎಚ್.ಸಿ.ಎಲ್ ಫೌಂಡೇಶನ್ ವತಿಯಿಂದ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ಕ್ರೀಡಾಕೂಟದಲ್ಲಿ ಟ್ರಯಥ್ಲಾನ್ (60 ಮೀಟರ್ ಓಟ, ಉದ್ದ ಜಿಗಿತ,ಬಾಲ್ ಥ್ರೋ) ವಿಭಾಗದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈತ ಜನಾರ್ದನ ಪೂಜಾರಿ ಮತ್ತು ಸಿಂಗಾರಿ ಗುಂಡೂರು ಇವರ ಪುತ್ರ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವೀರೇಂದ್ರ ಜೋಗಿ ತರಬೇತಿ ನೀಡಿ ಸ್ಪರ್ಧೆಗೆ ಸಿದ್ಧಗೊಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here