ಕುಂದಾಪುರ :ಗುಲ್ವಾಡಿಗೂ ನುಗ್ಗಿದ ನೆರೆ ನೀರು : 12 ಮನೆಗಳು ಜಲಾವೃತ : ಅಧಿಕಾರಿಗಳ ಭೇಟಿ

0
59

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಲವೆಡೆ ಮನೆಗಳೂ ಕೃಷಿ ಪ್ರದೆಶ ಮುಳುಗಡೆಯಾಗುತ್ತಿವೆ. ಇಲ್ಲಿನ ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಕೂರು ಕುಚ್ಚೆಟ್ಟಿ ಭಾಗದಲ್ಲಿ ನೆರೆ ಬಂದಿದೆ. ಇಲ್ಲಿನ ಸುಮಾರು 12 ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕುಂದಾಫುರ ಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ, ತಹಸೀಲ್ದಾರ್ ಶೋಭಾ ಲಕ್ಷ್ಮೀ ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಅಲ್ಲದೇ ತಕ್ಷಣ ಜನ ಜಾನುವಾರು ಸ್ಥಳಾಂತರಕ್ಕೆ ಬೋಟು ವ್ಯವಸ್ಥೆ ಕಲ್ಪಸಿದ್ದಾರೆ. ಈ ಸಂದರ್ಭ ಕಂದಾಯ ನಿರೀಕ್ಷಕರು, ಗ್ರಾಮ ಪಂಚಾಯತ್ ಪಿಡಿಓ, ಗ್ರಾಮ ಕರಣಿಕರು ಭೇಟಿ ನೀಡಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಶೆಟ್ಟಿ ಮಾಹಿತಿ ನೀಡಿದ್ದಾರೆ.

Click Here

LEAVE A REPLY

Please enter your comment!
Please enter your name here