ಎಕ್ಸಲೆಂಟ್‌ ಕುಂದಾಪುರ: ವಿಶೇಷ ಡಿಪಿಪಿ ತರಗತಿ ಉದ್ಘಾಟನೆ

0
116

ಕುಂದಾಪುರ ಮಿರರ್ ಸುದ್ದಿ…

Click Here

Click Here

ಕುಂದಾಪುರ :ಎಕ್ಸಲೆಂಟ್‌ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮುಂದಿನ ಸ್ಪಧಾತ್ಮಕ ಪರೀಕ್ಷೆಗಳಾದ ನೀಟ್‌,ಜೆಇಇ, ಸಿಇಟಿ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ವಿಶೇಷ ಡಿಪಿಪಿ ತರಗತಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ನೀಟ್‌, ಜೆಇಇ, ಸಿಇಟಿ ಕೋರ್ಸ್ಗಳ ಅನುಭವಿ ಹಿರಿಯ ಉಪನ್ಯಾಸಕರಾದ ಮಿ. ಬಾಲಾಜಿ ಗುಪ್ತ ಇವರ ಮಾಗದರ್ಶನದಲ್ಲಿ ಡಿಪಿಪಿ ತಂಡದ ಅನುಭವಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಮಿ. ಬಾಲಾಜಿ ಗುಪ್ತ ಅವರು ಮಾತನಾಡಿವಿದ್ಯಾರ್ಥಿಗಳ ಭವಿಷ್ಯತ್ತಿನ ಬೆಳಕಿಗೆ ಡಿಪಿಪಿ ತರಗತಿಯ ಅಗತ್ಯತೆಯನ್ನು ಹಾಗೂ ನೀಟ್‌,ಜೆಇಇ, ಸಿಇಟಿ ಪರೀಕ್ಷೆಯ ಸಿದ್ಧತೆಯ ಕುರಿತು ಪೂರ್ವತಯಾರಿಯ ವಿಧಾನಗಳನ್ನು ಬೋಧಿಸಿದರು ಹಾಗೂ ಡಿಪಿಪಿ ಕ್ಲಾಸ್‌ನ ಸಂಯೋಜಕರಾದ ಶ್ರೀಹರಿಶರ್ಮ, ಅಶೋಕ್‌ಸಿ.ಹೆಚ್, ಸ್ಮಿತಲ್‌ಪದ್ಮಜಾ ಮತ್ತು ಶುಭಾಶೆಟ್ಟಿ ಅವರು ಉಪಸ್ಥಿತರಿದ್ದರು. ಈ ಒಂದು ಸುಂದರ ಕಾರ್ಯಕ್ರಮದಲ್ಲಿ ಅವರೊಂದಿಗೆ ಎಂ. ಎಂ. ಹೆಗ್ಡೆ ಎಜುಕೇಶನಲ್‌ & ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷರಾದ ಎಂ. ಮಹೇಶ್‌ ಹೆಗ್ಡೆ ಅವರು ಮಾತನಾಡಿ ಡಿಪಿಪಿ ತರಗತಿಯ ಮೌಲ್ಯಗಳನ್ನು ಅರಿತು ಅದನ್ನು ಹೇಗೆ ಸದುಪಯೋಗಪಡಿಸಿಕೋಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿಕೊಟ್ಟರು. ಎಕ್ಸಲೆಂಟ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್‌ ಶೆಟ್ಟಿಯವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here