ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 5ರಂದು ಕುಂದಾಪುರದ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಉದ್ಯಮಿ, ಸೈಂಟ್ ಆಂಟನಿ ಕನ್‍ಸ್ಟ್ರಕ್ಷನ್ ಕಂಪೆನಿ ಪಾಲುದಾರ, ಎಂಜಿನಿಯರ್ ಲಯನ್ ರೋವನ್ ಡಿ’ ಕೋಸ್ತ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಮ್ಯಾಥ್ ಜೋಸೆಫ್, ಖಜಾಂಚಿಯಾಗಿ ಪುನೀತ್ ಶೆಟ್ಟಿ ಮತ್ತು ಉಪಕಾರ್ಯದರ್ಶಿ ಆಗಿ ರಮೇಶ್ ಶೆಟ್ಟಿ ಪದಗ್ರಹಣ ಸ್ವೀಕರಿಸಿದರು.
ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಟಿ. ಸೋನ್ಸ್ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ರೀಜನ್ ಚೇರ್ಮನ್ ಜನ್ನಾಡಿ ಸೋಮನಾಥ್ ಹೆಗ್ಡೆ ಹಾಗೂ ಝೂನ್ ಚೇರ್ ಪರ್ಸನ್ ಎಚ್. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.