ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ನಾಟಿ ಪ್ರಾತ್ಯಕ್ಷಿಕೆ, ಗದ್ದೆಯಲ್ಲಿ ಮಿಂದೆದ್ದ ಮಹಿಳೆಯರು…

0
96

ಕುಂದಾಪುರ ಮಿರರ್ ಸುದ್ದಿ…

ಕೋಟ: ಇತ್ತೀಚಿಗಿನ ದಿನಗಳಲ್ಲಿ ಮರೆಯಾಗುತ್ತಿರುವ ಸಾಂಪ್ರಾದಾಯಿಕ ಭತ್ತದ ನಾಟಿಯ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಭಾನುವಾರ ಕೋಟತಟ್ಟು ಹಿರಿಯ ಕೃಷಿಕ ಶಿವಮೂರ್ತಿ ಉಪಾಧ್ಯ ಇವರ ಕೃಷಿ ಭೂಮಿಯಲ್ಲಿ ಹಮ್ಮಿಕೊಳ್ಳಲಾಯಿತು.

ಭಾನುವಾರ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲ ಕೋಟ ಇದರ ಮಾರ್ಗದರ್ಶನದಲ್ಲಿ ಕೋಟದ ರೈತ ಸಂಪರ್ಕಕೇಂದ್ರ ಇದರ ಸಹಯೋಗದೊಂದಿಗೆ ಈ ಕಾರ್ಯಕ್ರಮ ನರವೆರಿತು.

ಸುಮಾರು 25ರಿಂದ ಮೂವತ್ತು ಮಹಿಳೆಯರಿದ್ದ ಪ್ರಾತ್ಯಕ್ಷಿಕೆಯಲ್ಲಿ ಕೋಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭಾ ಚಾಲನೆ ನೀಡಿ ಪ್ರಸ್ತುತ ಆಧುನಿಕತೆಯ ನಡುವೆ ಮರೆಯಾಗುತ್ತಿರು ಸಾಂಪ್ರದಾಯಿಕ ನಾಟಿ ಕಾರ್ಯದ ಮಹತ್ವವನ್ನು ಸಂಘ ಸಂಸ್ಥೆಗಳ ಮೂಲಕ ಪ್ರಚುರ ಪಡಿಸುತ್ತಿರುವ ಪಂಚವರ್ಣ ಮಹಿಳಾ ಮಂಡಲಕ್ಕೆ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದರು.

Click Here

ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಮಾತನಾಡಿ ಕೋಟತಟ್ಟು ಪರಿಸರದಲ್ಲಿ ತನ್ನದೆ ಆದ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಸಮಾಜಕ್ಕೆ ತನ್ನದೆ ಆದ ವೈಶಿಷ್ಟ್ಯತೆ ಪಸರಿಸಿದ ಕೀರ್ತಿ ಶಿವಮೂರ್ತಿ ಉಪಾಧ್ಯಾ ಇವರಿಗೆ ಸಲ್ಲುತ್ತದೆ ಅಂತಯೇ ಪಂಚವರ್ಣ ಸಂಸ್ಥೆ ಸಾಮಾಜಿಕ ಕಾರ್ಯದ ನಡುವೆ ಕೃಷಿ ಕಾರ್ಯಕ್ರಮಕ್ಕೆ ಹೆಚ್ಚಿನ ಒಲವು ನೀಡುತ್ತಿರುವ ಕುರಿತು ಹರ್ಷ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.

ಕೋಟತಟ್ಟು ಪಡುಕರೆ ಹಿರಿಯ ಕೃಷಿಕ ಶಿವಮೂರ್ತಿ ಉಪಾಧ್ಯಾ ಸಾಂಪ್ರದಾಯಿಕ ಕೃಷಿ ಪದ್ದತಿಯ ಕುರಿತು ಪ್ರಸ್ತುತ ಯುವ ಸಮೂಹ ಕೃಷಿ ಕಾರ್ಯದಿಂದ ಹಿಮ್ಮುಖರಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರಾದ ರವೀಂದ್ರ ತಿಂಗಳಾಯ, ವಿದ್ಯಾ ಸಂದೇಶ್ ಸಾಲಿಯಾನ್, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಜಿಲ್ಲಾ ಸಂಯೋಜಕ ರವೀಂದ್ರ ಮೊಗವೀರ, ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ ,ಪಂಚವರ್ಣ ಮಹಿಳಾ ಮಂಡದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು.

ಒಳನ್ ಕೆರೆಯವ ಸನ್ನವೇಶ, ಅಗಿಸುಡಿ ನೀಡಿ ಸ್ಚಾಗತ
ಪ್ರಾತ್ಯಕ್ಷಿಕೆಯಲ್ಲಿ ಬಹುಮುಖ್ಯವಾಗಿ ಗಣ್ಯರಿಗೆ ಭತ್ತದ ಅಗೆ ನೀಡಿ ಸ್ವಾಗತಿಸಲಾಯಿತು. ನಾಟಿ ಪ್ರಾತ್ಯಕ್ಷಿಕೆಯ ಆರಂಭದಲ್ಲಿ ಉತ್ಸಾಹದಿಂದ ಸ್ಥಳೀಯ ಕೃಷಿಕೂಲಿಯಾಳುಗಳೊಂದಿಗೆ ಪಂಚವರ್ಣ ಮಹಿಳೆಯರು ನಾಟಿ ಕಾರ್ಯ ಆರಂಭಿಸಿದರು. ಈ ನಡುವೆ ಸಾಂಪ್ರದಾಯಿಕ ನಾಟಿಯ ಭಾಗವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ ಜಯರಾಮ ಶೆಟ್ಟಿ ಒಳಲ್ ಕರೆಯುವ ಮೂಲಕ ನಾಟಿ ಕಾರ್ಯಕ್ಕೆ ವೇಗ ನೀಡಿದರು. ಇವರೊಂದಿಗೆ ಸ್ಥಳೀಯ ಮಹಿಳಾ ಕೂಲಿಯಾಳುಗಳು ಪರಂಪರೆಯ ಹಿಂದಿನ ಕೃಷಿ ಹಾಡುಗಳನ್ನು ಗದ್ದೆಯಲ್ಲೆ ಮೊಳಗಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಎಂ ಬಾಯರಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು. ಮಹಿಳಾ ಮಂಡಲದ ಪ್ರದಾನಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ಪಂಚವರ್ಣದ ಕಾರ್ಯದರ್ಶಿ ಸುಧೀಂದ್ರ ಜೋಗಿ,ಶಶಿಧರ ತಿಂಗಳಾಯ ಸಹಕರಿಸಿದರು.

LEAVE A REPLY

Please enter your comment!
Please enter your name here