ಮಾರಣಕಟ್ಟೆ ದೇವಸ್ಥಾನ ಸಮೀಪ್ ಬಸ್ ನಿಲ್ದಾಣ ಉದ್ಘಾಟಿಸಿದ ಶಾಸಕ ಗುರುರಾಜ್ ಗಂಟಿಹೊಳೆ

0
47

ಕುಂದಾಪುರ ಮಿರರ್ ‌ಸುದ್ದಿ…

ಬೈಂದೂರು: ಕ್ಷೇತ್ರದ ಶಕ್ತಿಕೇಂದ್ರಗಳಲ್ಲಿ ಒಂದಾದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಬಸ್ ತಂಗುದಾಣವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ನಂತರ ಮಾತನಾಡಿದ ಅವರು ಬಸ್ ಗಾಗಿ‌ ಕಾಯುವ ಪ್ರತಿ ಪ್ರಯಾಣಿಕರಿಗೂ ಸುಸಜ್ಜಿತ ಬಸ್ ನಿಲ್ದಾಣ ಹೆಚ್ಚು ಅನುಕೂಲವಾಗಲಿದೆ. ಮಳೆ, ಬಿಸಿಲಿನ ಸಂದರ್ಭಗಳಲ್ಲಿ ಇದರ ಮೂಲಕ ನೆರಳು ಪಡೆಯಬಹುದಾಗಿದೆ. ಎಲ್ಲ ಕಡೆಗಳಲ್ಲಿಯೂ ಸುಸಜ್ಜಿತ ಬಸ್ ನಿಲ್ದಾಣಗಳ ಅವಶ್ಯಕತೆ ಇದೆ ಎಂದು ಹೇಳಿದರು.

Click Here

ವನಮಹೋತ್ಸವದ ಪ್ರಯುಕ್ತ ಇದೇ ಸಂದರ್ಭದಲ್ಲಿ ದೇವಸ್ಥಾನದ ಹತ್ತಿರ ಗಿಡಗಳನ್ನು ನೆಡಲಾಯಿತು. ವನಮಹೋತ್ಸವದ ಮಹತ್ವ ವಿವರಿಸಿದರು.
ಚಿತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ರವಿಶೆಟ್ಟಿ, ಪ್ರಮುಖರಾದ ಡಾ. ಅತುಲ್ ಶೆಟ್ಟಿ, ರಘುರಾಮ್ ಶೆಟ್ಟಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here