ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಖಿದ್ಮಾಹ್ ಫೌಂಡೇಶನ್ ಕುಂದಾಪುರ ಹಾಗೂ ಬೈಂದೂರು ತಾಲೂಕು ವತಿಯಿಂದ ಇತ್ತೀಚೆಗೆ ಪರಿಸರ ಉಳಿಸಿ ಬೆಳೆಸುವ ಅಭಿಯಾನದ ಪ್ರಯುಕ್ತ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಶಿರೂರಿನಲ್ಲಿ ನಡೆಯಿತು.
ಖಿದ್ಮಾಲ್ ಫೌಂಡೇಶನ್ ಅಧ್ಯಕ್ಷರಾದ ಜನಾಬ್ ಅಬು ಮೊಹಮ್ಮದ್ ಶೇಖ್ ಅಧ್ಯಕ್ಷತೆ ವಹಿಸಿದ್ದರು.
ಮೌಲನಾ ಝಮಿರ್ ಅಹಮ್ಮದ್ ರಶಾಧಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೊಹಮ್ಮದ್ ಯಾಸೀನ್ ಶಿರೂರು ದಿಕ್ಸೂಚಿ ಮಾತುಗಳನ್ನಾಡಿ ಗಿಡಗಳನ್ನು ನೆಡುವುದರಿಂದ ಪ್ರಕೃತಿ ಸಮತೋಲನ ಕಾಯ್ದುಕೊಳ್ಳುವುದು ಉತ್ತಮ, ಪರಿಸರ ಸಂರಕ್ಷಣೆ ಎಲ್ಲರ ಆದ್ಯತೆಯಾಗಿದೆ. ಪರಿಸರವನ್ನು ರಕ್ಷಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಶೇಖ್‍ಜಿ ಅಬ್ದುಲ್ ಹಮಿದ್, ಖಿದ್ಮಾಹ್ ಫೌಂಡೇಶನ್ ರಿಯಾದ್ ಅಧ್ಯಕ್ಷರಾದ ಅಬು ಸಲಾಮ್ ಮೌಲನಾ ಕಾರ್ಯಕ್ರಮ ಉದ್ದೇಶಿಸಿ ಮಾತನ್ನಾಡಿದರು. ಮೊಹಮ್ಮದ್ ಇಕ್ಬಾಲ್ ಖಾಜಿ ಶಿರೂರು, ಅಬ್ದುಲ್ ಶುಕೂರ್ ಜಿ.ಡಿ ಉಪಸ್ಥಿತರಿದ್ದರು.
ಮೊಹಮ್ಮದ್ ಯಾಸೀನ್ ಅವರು ವಿದ್ಯಾರ್ಥಿಗಳಿಗೆ ಕ್ವಿಝ್ ಕಾರ್ಯಕ್ರಮ ನಡೆಸಿಕೊಟ್ಟರು. ಕ್ವಿಝ್ ನಲ್ಲಿ ವಿಜೇತ ಐದು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಖಿದ್ಮಾದ ಸದಸ್ಯರಾದ ಖಾಜಾ ಬಾೈ, ಇಬ್ರಾಹಿಂ ಬೆದ್ರೆ, ಅಬ್ದುಲ್ ರೆಹಮಾನ್,ಎನ್.ಎಸ್. ಇರ್‍ಫಾನ್,ಮೊಹಮ್ಮದ್ ಇಲ್ಯಾಸ್, ಮೊಹಮ್ಮದ್ ಆಶ್ರಫ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಬಳಿಕ ಶಾಲಾ ಮೈದಾನದಲ್ಲಿ ಗಿಡಗಳನ್ನು ನೆಡಲಾಯಿತು.