ಕುಂದಾಪುರ :ಮಾಸ್ಟರ್ ಮಹ್ಮದ್ ಗೌಸ್ ನಿಧನ

0
138

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಸ್ಥಳೀಯ ಹಂಗಳೂರು ನಿವಾಸಿ ಮಾಸ್ಟರ್ ಮಹ್ಮದ್ ಗೌಸ್ (79) ಅವರು ಅಲ್ಪಕಾಲದ ಅಸೌಖ್ಯದಿಂದ ಜು.9ರ ಮಂಗಳವಾರ ಮುಂಜಾನೆ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದ್ದಾರೆ.

Click Here

ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅವರು ತದ ನಂತರ ಗಲ್ಫ್ ರಾಷ್ಟ್ರದಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದರು. ಜಮಾತಿನ ಹಿರಿಯರಾಗಿ, ಕುಂದಾಪುರ ಜಾಮಿಯ ಮಸೀದಿ, ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದ ಇವರು ಇನ್ನಿತರ ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು . ಮೃತರು ಪತ್ನಿ, ಎರಡು ಹೆಣ್ಣು ಒಂದು ಗಂಡುಮಕ್ಕಳನ್ನು ಅಗಲಿದ್ದಾರೆ.

Click Here

LEAVE A REPLY

Please enter your comment!
Please enter your name here