ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅತೀ ವೇಗದಿಂದ ಬಂದ ಕಾರೊಂದು ಬ್ಯಾರಿಕೇಡ್ ಸಮೀ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಮಿನಿ ಲಾರಿಯೊಂದಕ್ಕೆ ಪಲ್ಟಿಯಾದ ಘಟನೆ ಶುಕ್ರವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೀಜಾಡಿ ಕ್ರಾಸ್ ಎದುರು ಧನಲಕ್ಷ್ಮಿ ಹಾರ್ಡವೇರ್ ಸಮೀಪ ನಡೆದಿದೆ.
ಘಟನೆಯಲ್ಲಿ ಹುಂಡೆ ಐ 10 ಕಾರು ನಾಲ್ಕು ಪಲ್ಟಿಯಾಗಿ ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದ 407 ಲಾರಿಗೆ ಗುದ್ದಿ, ಮೇಲ್ಮುಖವಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ.
ವೇಗವಾಗಿ ಬಂದ ಕಾರು ಚಾಲಕನಿಗೆ ಅಲ್ಲಿ ಹಾಕಿದ ಬ್ಯಾರಿಕೆಡ್ ಕಂಡು ಹಠಾತ್ತನೆ ಬ್ರೇಕ್ ಹಾಕಿದ್ದಾನೆ. ಕಾನೂನಿನ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರೀಕೇಡ್ ಅಳವಡಿಸಲು ಅವಕಾಶವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಚಾರದ ತೆವಲಿಗೆ ಬಿದ್ದವರು ಜಾಹೀರಾತುಗಳನ್ನು ಮುದ್ರಿಸಿ ಕಾನೂನು ಬಾಹಿರವಾಗಿ ಬ್ಯಾರೀಕೇಡ್ ಗಳನ್ನು ಅಳವಡಿಸುತ್ತಿದ್ದಾರೆ. ಇದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.