ಕೋಟ :ಲಯನ್ಸ್ ಪ್ರಾಂತೀಯ ಅಧ್ಯಕ್ಷರಾಗಿ ಬನ್ನಾಡಿ ಸೋಮನಾಥ ಹೆಗ್ಡೆ ಆಯ್ಕೆ

0
76

ಕುಂದಾಪುರ ಮಿರರ್ ಸುದ್ದಿ…

ಕೋಟ: ಲಯನ್ಸ್ ಜಿಲ್ಲೆ ಪ್ರಾಂತೀಯ ಅಧ್ಯಕ್ಷರಾಗಿ, ಕುಂದಾಪುರ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಇವರನ್ನು ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್ ನಿಯುಕ್ತಿಗೊಳಿಸಿದ್ದಾರೆ.

ಬನ್ನಾಡಿ ಸೋಮನಾಥ ಹೆಗ್ಡೆ ಅವರು ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಸ್ಥಾಪಕಧ್ಯಕ್ಷರಾಗಿ, ಲಯನ್ಸ್ ರೀಜನ್ ಕೋ-ಆರ್ಡಿನೇಟರ್ ಆಗಿ, ಲಯನ್ಸ್ ವಲಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು.

Click Here

Click Here

ಪ್ರಾಂತೀಯ ಕಾರ್ಯದರ್ಶಿಯಾಗಿ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ನಿವೃತ್ತ ಮ್ಯಾನೇಜರ್ ಹಾಗೂ ಬ್ರಹ್ಮಾವರ ಲಯನ್ಸ್ ಕ್ಲಬ್‍ನ ಲಯನ್ ಆನಂದ ಶೆಟ್ಟಿ ಕಬ್ಬೈಲ್ ಇವರನ್ನು ನೇಮಿಸಲಾಗಿದೆ.

ಪ್ರಾಂತ್ಯ, ವಲಯ ಒಂದರ ವಲಯಾಧ್ಯಕ್ಷರನ್ನಾಗಿ ತೆಕ್ಕಟ್ಟೆ ಲಯನ್ಸ್ ಕ್ಲಬ್‍ನ ಧರ್ಮರಾಜ್ ಮುದಲಿಯಾರ್ ಮತ್ತು ವಲಯ ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಶೆಟ್ಟಿ, ವಲಯ IIರ ವಲಯಾಧ್ಯಕ್ಷರನ್ನಾಗಿ ಹಂಗಳೂರು ಲಯನ್ಸ್ ಕ್ಲಬ್‍ನ ಬಾಲಕೃಷ್ಣ ಶೆಟ್ಟಿ ಮತ್ತು ವಲಯ ಕಾರ್ಯದರ್ಶಿಯಾಗಿ ವಿಲ್‍ಫ್ರೆಡ್ ಮೆನೆಜಸ್ ಹಾಗೂ ವಲಯ III ರ ವಲಯಾಧ್ಯಕ್ಷರನ್ನಾಗಿ ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್‍ನ ಬೆಳ್ವೆ ವಂಸತ್ ಶೆಟ್ಟಿ ಮತ್ತು ವಲಯ ಕಾರ್ಯದರ್ಶಿಯಾಗಿ ಪಟ್ಟಾಭಿರಾಮ್ ಭಟ್ ಇವರನ್ನು ನೇಮಿಸಲಾಗಿದೆ.

Click Here

LEAVE A REPLY

Please enter your comment!
Please enter your name here