ಕುಂದಾಪುರ: ಶ್ರೀ ನಾರಾಯಣ ಮಹಿಳಾ ಸಹಕಾರ ಸಂಘಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ

0
334

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘ ನಿ., ಕುಂದಾಪುರ ಇಲ್ಲಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಭೇಟಿ ನೀಡಿದರು. ಸಂಸ್ಥೆಯ ಗುರಿ, ಧ್ಯೇಯೋದ್ದೇಶವನ್ನು ಶ್ರೀ ನಾರಾಯಣ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಗುಣರತ್ನ ಅವರು ಸಂಸದರ ಮುಂದೆ ವಿವರಿಸಿದರು.

Click Here

ಮಹಿಳಾ ಸಬಲೀಕರಣದ ಧ್ಯೇಯವನ್ನು ಇಟ್ಟುಕೊಂಡು ಆರಂಭವಾದ ಈ ಸಹಕಾರ ಸಂಘ ಕ್ಷೀಪ್ರ ಅವಧಿಯಲ್ಲಿ ಮಹಿಳಾ ಸ್ವಾವಲಂಬನೆಗೆ ಉತ್ತೇಜಿಸುತ್ತಿರುವುದನ್ನು ಸಂಸದರು ಶ್ಲಾಘಿಸಿ, ಮಹಿಳಾ ಸಹಕಾರಿಗಳನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಮಹಿಳಾ ಸಹಕಾರ ಸಂಘದ ವತಿಯಿಂದ ನೂತನ ಸಂಸದರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಸುನೇತ್ರಾ ಸತೀಶ, ನಿರ್ಮಲ ಆರ್., ಅಶ್ವಿನಿ, ಕುಸುಮ ಆರ್.ಪೂಜಾರಿ, ಆರತಿ ಜಿ.ಪೂಜಾರಿ, ಬೇಬಿ ಶ್ರೀಕಾಂತ, ಹೇಮಾವತಿ, ಗಾಯತ್ರಿ, ಜಾನಕಿ, ಶ್ರೀಮತಿ, ಸೀಮಾಚಂದ್ರ ಪೂಜಾರಿ, ಪ್ರೇಮ ಸಿ.ಎಸ್ ಪೂಜಾರಿ, ಲಕ್ಷ್ಮೀ ಪೂಜಾರಿ, ಶ್ರೀದೇವಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಉಪಸ್ಥಿತರಿದ್ದರು.
ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷರಾದ ಸುರೇಶ ಶೆಟ್ಟಿ ಬೀಜಾಡಿ, ಪ್ರಧಾನ ಕಾರ್ಯದರ್ಶಿ ಸುದೀರ್ ಕೆ.ಎಸ್., ಸತೀಶ್ ಕೋಟ್ಯಾನ್, ನಗರ ಬಿಜೆಪಿ ಅಧ್ಯಕ್ಷ ರಾಜೇಶ ಕಡ್ಗಿಮನೆ, ತಾ.ಪಂ.ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಪೂಜಾರಿ ಬೀಜಾಡಿ, ಅಜಿತ್ ಪೂಜಾರಿ, ವಿಶ್ವನಾಥ ಪೂಜಾರಿ, ಭಾಸ್ಕರ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here