ಹಾಲಾಡಿ :ಚೋರಾಡಿಯಲ್ಲಿ ಸೇತುವೆ ಸಂಪರ್ಕ ಕುಸಿತ

0
511

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಎರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡುತ್ತಿದ್ದು ಹಾಲಾಡಿ ಸಮೀಪದ ಚೋರಾಡಿಯಲ್ಲಿ ಸೇತುವೆಯ ಸಂಪರ್ಕವೇ ಕಡಿದು ನದಿ ಪಾಲಾಗಿದೆ. ಸೇತುವೆಯ ಸಂಪರ್ಕ ಕೊಂಡಿ ಸಂಪೂರ್ಣವಾಗಿ ಕುಸಿದು ಹೋಗಿದೆ. ಕಳೆದ ಎರಡು ವರ್ಷದ ಹಿಂದೆ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು.
ಹಾಲಾಡಿ ಟಿವಿ‌ಎಸ್ ಶೋರೂಂ ಹತ್ತಿರದಿಂದ ಮುದೂರಿಗೆ ಹೋಗುವ ಮಾರ್ಗದ ಸೇತುವೆ ಇದಾಗಿದ್ದು ಈ ಭಾಗಕ್ಕೆ ಸಂಪರ್ಕ ಬೆಸೆಯುವ ಪ್ರಮುಖ ಸೇತುವೆಯಾಗಿದೆ. ನೀರಿನ ರಭಸಕ್ಕೆ ಸೇತುವೆಯ ಬಳಿ ಸಂಪರ್ಕ ಸಂಪೂರ್ಣ ಕುಸಿದು ನೀರುಪಾಲಾಗಿದೆ. ಎರಡು ಭಾಗದ ಸಂಪರ್ಕ ಕಡಿತಗೊಂಡಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಅಧಿಕಾರಿಗಳು ಭೇಟಿ ನೀಡಿದ್ದಾರೆ.

Click Here

LEAVE A REPLY

Please enter your comment!
Please enter your name here