ಶ್ರೀ ನಾರಾಯಣ ಮಹಿಳಾ ಸಹಕಾರ ಸಂಘದ ವತಿಯಿಂದ ಸಂಸದರಿಗೆ ಮನವಿ

0
128

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘ ನಿ., ಕುಂದಾಪುರ ಇಲ್ಲಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ನೂತನ ಸಂಸದರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸುವಂತೆ ಸಂಸದರಲ್ಲಿ ಮನವಿ ಸಲ್ಲಿಸಲಾಯಿತು.

Click Here

ಸಂಸ್ಥೆಯು ೨೦೨೩ರಲ್ಲಿ ಆರಂಭವಾಗಿದ್ದು ೧೦೦೦ಕ್ಕೂ ಅಧಿಕ ಮಹಿಳಾ ಸದಸ್ಯರನ್ನು ಒಳಗೊಂಡಿದೆ. ಸಂಸ್ಥೆಯ ಮುಖ್ಯ ಧ್ಯೇಯೋದ್ದೇಶ ಮಹಿಳಾ ಸಬಲೀಕರಣ ಆಗಿದ್ದು ಈಗಾಗಲೇ ೧೫೦ಕ್ಕೂ ಮಿಕ್ಕಿ ಸ್ವ-ಸಹಾಯ ಸಂಘಗಳನ್ನು ಪ್ರಾರಂಭಿಸಿ ಅಂದಾಜು ರೂ.೨ ಕೋಟಿಯ ತನಕ ಸಾಲ ಸೌಲಭ್ಯವನ್ನು ನೀಡಿ ಮಹಿಳಾ ಸ್ವಾವಲಂಬನೆಗೆ ನೆರವಾಗಿದೆ, ಇನ್ನೂ ಹೆಚ್ಚಿನ ಮಹಿಳೆಯರಿಗೆ ನೆರವಾಗುವ ಗುರಿಯನ್ನು ಸಂಸ್ಥೆಯು ಹೊಂದಿದ್ದು ಸರಕಾರದ ವತಿಯಿಂದ ಸಂಬಂಧಿತ ಯೋಜನೆಯ ಮೂಲಕ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಅವಕಾಶವಿದ್ದಲ್ಲಿ ಅದರ ವ್ಯಾಪ್ತಿಗೆ ಈ ಸಹಕಾರ ಸಂಘವನ್ನು ಒಳಪಡಿಸುವಂತೆ ಮನವಿ ಮಾಡಲಾಯಿತು.
ಸಂಘದ ಅಧ್ಯಕ್ಷೆ ಗುಣರತ್ನ ಸಂಸದರಿಗೆ ಮನವಿ ಸಲ್ಲಿಸಿದರು. ಸಂಘದ ಉಪಾಧ್ಯಕ್ಷೆ ಉಪಾಧ್ಯಕ್ಷೆ ಸುನೇತ್ರಾ ಸತೀಶ, ನಿರ್ದೇಸಕರಾದ ನಿರ್ಮಲ ಆರ್., ಅಶ್ವಿನಿ, ಕುಸುಮ ಆರ್.ಪೂಜಾರಿ, ಆರತಿ ಜಿ.ಪೂಜಾರಿ, ಬೇಬಿ ಶ್ರೀಕಾಂತ, ಹೇಮಾವತಿ, ಗಾಯತ್ರಿ, ಜಾನಕಿ, ಶ್ರೀಮತಿ, ಸೀಮಾಚಂದ್ರ ಪೂಜಾರಿ, ಪ್ರೇಮ ಸಿ.ಎಸ್ ಪೂಜಾರಿ, ಲಕ್ಷ್ಮೀ ಪೂಜಾರಿ, ಶ್ರೀದೇವಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here