ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ರುಬೆಟ್ಟು ಹಾಗೂ ಬನ್ನಾಡಿ ಕಮ್ಮಟ್ಟು ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಉಡುಪಿ ಮತ್ತು ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕುಂದಾಪುರ ಎ.ಸಿ ರಶ್ಮಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದರು. ಈ ವೇಳೆ ಸ್ಥಳೀಯರೊಂದಿಗೆ ಚರ್ಚಿಸಿದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ರಸ್ತೆ ಸಂಪರ್ಕ ಹಾಗೂ ಅಭಿವೃದ್ಧಿಗೊಳಿಸುವಂತೆ ಕಮ್ಮಟ್ಟುಭಾಗದಲ್ಲಿ ಅಳವಡಿಸಲಾದ ಮೊರಿಯನ್ನು ತೆರವುಗೊಳಿಸಿ ಸೇತುವೆ ನಿರ್ಮಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಡ್ಡರ್ಸೆ ಗ್ರಾಮಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್, ಸದಸ್ಯರಾದ ಕೋಟಿ ಪೂಜಾರಿ, ಪ್ರಕಾಶ್ ಆಚಾರ್, ತೀರ್ಥನ್ ,ಭಾಸ್ಕರ್ ಪೂಜಾರಿ,ಸ್ಥಳೀಯ ಮುಖಂಡರಾದ ಕುಶ ಆಚಾರ್,ರಾಜು ಶ್ರೀಯಾನ್ ಮತ್ತಿತರು ಇದ್ದರು.