ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಪಾಂಡೇಶ್ವರ ಕಳಿಬೈಲು ಕೊರಗಜ್ಜನ ಸಾನಿಧ್ಯದಲ್ಲಿ ಬಾರಿ ಪ್ರಮಾಣದಲ್ಲಿ ನೆರೆಗೆ ತುತ್ತಾಗಿದ್ದು, ಬೆಳಿಗ್ಗೆಯಿಂದಲೇ ಕೊರಗಜ್ಜನ ದೈವದ ಭಕ್ತರೊರ್ವರು ದೋಣಿಯ ವ್ಯವಸ್ಥೆ ಕಲ್ಪಿಸಿದರು.
ನೆರೆಯ ನಡುವೆ ಶ್ರೀ ಕ್ಷೇತ್ರದಲ್ಲಿ ಭಕ್ತರ ಮಹಾಪೂರ ಹರಿದುಬಂತು.
ಅಜ್ಜನ ದೈವಸ್ಥಾನದ ಮುಕ್ತೇಸರ ಎಂ.ಸಿ ಚಂದ್ರಶೇಖರ್, ಅರ್ಚಕ ಅಭಿಜಿತ್ ಪಾಂಡೇಶ್ವರ ದೋಣಿ ಚಾಲಕರಾಗಿ ಭಕ್ತರನ್ನು ಕ್ಷೇತ್ರಕ್ಕೆ ಕರೆತಂದ ಪೂಜಾ ಕೈಂಕರ್ಯ ನೆರವೆರಿಸಿದರು. ಕೊರಗಜ್ಜ ದೈವಸ್ಥಾನದ ಸುತ್ತಲೂ ನೀರಿನಿಂದ ಜಲಾವೃತವಾಗಿದ್ದು ಸುತ್ತಮುತ್ತಲಿನ ಕೃಷಿ ಭೂಮಿ ಮನೆಗಳು ನೆರೆಯೊಳಗೆ ಮುಳುಗಿಕೊಂಡಿದೆ.