ಕುಂದಾಪುರ :ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ‌ ಉಡುಪಿ ಜಿಲ್ಲಾ ಘಟಕದ ಪುನರ್ ರಚನೆ ಉದ್ಘಾಟನೆ, ವಿದ್ಯಾರ್ಥಿ ವೇತನ, ಸದಸ್ಯತ್ವ ಅಭಿಯಾನ

0
465

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಹೋಟೆಲ್ ಕಾರ್ಮಿಕರು ಅನೇಕ ರೀತಿಯ ಎಡುರು ತೊಡರುಗಳನ್ನು ಎದುರಿಸುತ್ತಿದ್ದು, ಹೋಟೆಲ್ ಮಾಲೀಕರು ನೀಡಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕಿದೆ. ನಮಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಿ ನ್ಯಾಯ ದೊರೆಯುವಂತಾಗಬೇಕಾದರೆ ಸಂಘಟನೆ ಅವಶ್ಯಕ. ಸಂಘಟನೆ ಇಲ್ಲದಿದ್ದರೆ ಶಕ್ತಿ ಇರುವುದಿಲ್ಲ. ಕಾರ್ಮಿಕರ ಜೀವನವನ್ನು ಯೋಗ್ಯವಾಗಿ ಯಶಸ್ವಿಯಾಗಿ ನಡೆಸಲು ಅವಕಾಶ ನೀಡಬೇಕಾದುದು ಹೋಟೆಲ್ ಮಾಲೀಕರ ಜವಾಬ್ದಾರಿ. ಹೋಟೆಲ್ ಮಾಲೀಕರು ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸುವಲ್ಲಿ ಕಾರ್ಮಿಕರ ಕೊಡುಗೆ ಅಮೂಲ್ಯವಾದುದು ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ಕುಂದಾಪುರದ ವೈಟ್ ಹೌಸ್ ಸಭಾಂಗಣದಲ್ಲಿ ಬುಧವಾರ ಜರಗಿದ ಉಡುಪಿ ಜಿಲ್ಲಾ ಘಟಕದ ಪುನರ್ ರಚನೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

Click Here

ಇತ್ತೀಚಿನ ದಿನಗಳಲ್ಲಿ ಇಡಿ ಹಾಗೂ ಐಟಿ ಅಧಿಕಾರಿಗಳು ಮಂತ್ರಿಗಳು, ಶಾಸಕರು, ಸಂಸದರ ಹಾಗೂ ಉಳ್ಳವರ ಮೇಲೆ ದಾಳಿ ಮಾಡದೆ ದುಡಿದು ತಿನ್ನುವವರ ಮೇಲೆ ದಾಳಿ ನಡೆಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ ಅವರು, ಹೋಟೆಲ್ ಕಾರ್ಮಿಕರು ಸಂಘಟಿತರಾಗಿ ನಮ್ಮ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯುವಲ್ಲಿ ಶ್ರಮಿಸಿ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದರು.

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಸತೀಶ್ ಜೋಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಹೋಟೆಲ್ ಕಾರ್ಮಿಕರ ಮಕ್ಕಳನ್ನು ಗೌರವಿಸಲಾಯಿತು. ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. ಉದಯ ಅನಿಸಿಕೆ ಹಂಚಿಕೊಂಡರು. ಕುಂದಾಪುರದ ಕಾರ್ಮಿಕ ನಿರೀಕ್ಷಕ ವಿಜೇಂದ್ರ, ಗೌರವಾಧ್ಯಕ್ಷ ಶರತ್ ಶೆಟ್ಟಿ ಬಿದ್ಕಲ್‍ಕಟ್ಟೆ, ರಾಜ್ಯ ಉಪಾಧ್ಯಕ್ಷ ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷ ಕೃಷ್ಣ ಎಂ.ಕುಲಕರ್ಣಿ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್ ಶೆಟ್ಟಿ ಗಂಟಿಹೊಳೆ, ದ.ಕ. ಜಿಲ್ಲಾಧ್ಯಕ್ಷ ಮೋಹನ್, ಉಪಾಧ್ಯಕ್ಷ ಪುನೀತ್ ಬೆಳ್ವೆ, ಕಾರ್ಯಾಧ್ಯಕ್ಷ ಗೋಪಿ ಶೆಟ್ಟಿ, ಕಾರ್ಯದರ್ಶಿ ಉಷಾ, ಶ್ರವಣ್, ಚಂದ್ರ ನಾಯರಿ, ಸೃಜನ್, ಪುರುಷೋತ್ತಮ ಪೂಜಾರಿ, ಶೇಖರ ಕುಲಾಲ್, ವನಿತಾ, ರೇವತಿ, ಗಣೇಶ ಉಳ್ಳುರು ಮೊದಲಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ವೀರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾವ್ಯ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here