ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಇತ್ತೀಚಿಗೆ ಹಂಗಳೂರು ಶ್ರೀ ಕೃಷ್ಣ ಸಭಾಗ್ರಹದಲ್ಲಿ ಜರುಗಿತು.
ಮಾಜಿ ಜಿಲ್ಲಾ ಗವರ್ನರ್ ನೀಲಕಾಂತ್ ಎಂ. ಹೆಗ್ಡೆ ಪದಪ್ರದಾನ ನಡೆಸಿ ಶುಭಹಾರೈಸಿದರು. ನೂತನ ಅಧ್ಯಕ್ಷರಾಗಿ ಡಾ. ವಾಣಿಶ್ರೀ ಐತಾಳ್ ಕಾರ್ಯದರ್ಶಿಯಾಗಿ ಡಾ. ಶಿಲ್ಪಾ ಶೈಲೇಶ್ ರಾವ್, ಖಜಾಂಜಿಯಾಗಿ ಅಮೃತ ಬನವಾಲಿಕರ್ ಅಧಿಕಾರ ಹಸ್ತಾಂತರಿಸಲಾಯಿತು.
ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ ಯುಕ್ತಿ ಉಡುಪ ಅವರಿಗೆ ಸನ್ಮಾನಿಸಲಾಯಿತು.
ಸಾಮಾಜಿ ಚಟುವಟಿಕೆಗೆ ತೊಡಗಿಸಿಕೊಂಡ ಪ್ರತಿಷ್ಟಿತ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಪದಾಧಿಕಾರಿಗಳಾದ ಗಣೇಶ್ ಆಚಾರ್ಯ.ಕೆ ಹಾಗೂ ಯು. ಶಂಕರ ಶೆಟ್ಟಿ ಯವರನ್ನ ಗೌರವಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ಲಯನ್ಸ್ ಜಿಲ್ಲಾ ರಾಯಭಾರಿ ಅರುಣ್ ಕುಮಾರ್ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಪ್ರಾಂತೀಯ ಕಾರ್ಯದರ್ಶಿ ಆನಂದ್ ಶೆಟ್ಟಿ, ವಲಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ,ವಿಸ್ತರಣಾಧಿಕಾರಿ ಅಕ್ಷಯ್ ಹೆಗಡೆ, ನೂತನ ಕಾರ್ಯದರ್ಶಿ ಶಿಲ್ಪ ಶೈಲೇಶ್, ನಿಕಟ ಪೂರ್ವ ಕಾರ್ಯದರ್ಶಿ ಸುಮಶ್ರೀ ಧನ್ಯ, ನಿಕಟಪೂರ್ವ ಕೋಶಾಧಿಕಾರಿ ಕಲ್ಷನಾ ಭಾಸ್ಕರ್ ಲಯನ್ಸ್ ಜಿಲ್ಲೆ 317ಅ ಸಂಪುಟ ಸದಸ್ಯರು, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಪದಾಧಿಕಾರಿಗಳು, ಸದಸ್ಯರು,ರೋಟರಿ ಸದಸ್ಯರು,ಆಹ್ವಾನಿತರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ ಸ್ವಾಗತಿಸಿದರು. ಶಿಲ್ಪ ಶೈಲೇಶ್ ವಂದಿಸಿದರು. ಚಂದ್ರಿಕಾ ಧನ್ಯಕಾರ್ಯಕ್ರಮ ನಿರೂಪಿಸಿದರು.