ಕುಂದಾಪುರ ಮಿರರ್ ಸುದ್ದಿ…
ಕೋಟ: ನೆರೆ ಪೀಡಿತ ಹಾನಿಗೊಂಡ ವಿವಿಧ ಭಾಗಗಳಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿದರು. ಅದರಲ್ಲಿ ವಿಶೇಷವಾಗಿ ಸಾಲಿಗ್ರಾಮದಿಂದ ಕಾವಡಿ ಸಂಪರ್ಕಿಸುವ ಕಾರ್ಕಡ ರಸ್ತೆಯ ಸನಿಹದ ಅಪಾಯಕ್ಕೆ ಆಹ್ವಾನಿಸುವ ಕೆರೆ ಬಾರಿ ಮಳೆಗೆ ಕುಸಿತಗೊಂಡಿದ್ದು ಪಟ್ಟಣಪಂಚಾಯತ್ ಸದಸ್ಯ ರಾಜು ಪೂಜಾರಿ ಕಾರ್ಕಡ ಇವರೊಂದಿಗೆ ವೀಕ್ಷಿಸಿ ಸಂಬಂಧಿಸಿದ ಇಲಾಖೆಗೆ ತುರ್ತು ಕ್ರಮಕೈಗೊಳ್ಳಲು ಸೂಚಿಸಿದರು.