ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಂಗಳವಾರ ಕಂಡ್ಲೂರು ಸೇತುವೆಯಿಂದ ಹೊಳೆಗೆ ಹಾರಿ ಕೊಚ್ಚಿಕೊಂಡು ಹೋಗಿದ್ದ ಹರೀಶ್ ಕಾಳಾವರ (44ವ) ಅವರ ಮೃತದೇಹ ಗುರುವಾರ ಪತ್ತೆಯಾಗಿದೆ. ಮೂರು ದಿನಗಳ ತೀವ್ರ ಹುಡುಕಾಟದ ಬಳಿಕ ಆನಗಳ್ಳಿ ಸಮೀಪ ಮೃತದೇಹ ಪತ್ತೆಯಾಗಿದೆ.
ನದಿಗೆ ಹಾರಿದ ಕೂಡಲೇ ಹುಡುಕಾಟ ಆರಂಭಿಸಲಾಗಿತ್ತು. ನದಿ ತುಂಬಿ ಹರಿಯುತ್ತಿದ್ದು ಹುಡುಕಾಟ ಕಷ್ಟಕರವಾಗಿತ್ತು. ಕುಂದಾಪುರದ ಅಗ್ನಿಶಾಮಕ ದಳದ ಸಿಬಂದಿಗಳುಮ ಶೌರ್ಯ ತಂಡದ ಸದಸ್ಯರು, ಮುಳುಗುತಜ್ಞ ಈಶ್ವರ್ ಮಲ್ಪೆ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು.
ಹರೀಶ ಅವರ ಕೌಟುಂಬಿಕ ಜಗಳ ಠಾಣೆಯ ಮೆಟ್ಟಿಲೇರಿತ್ತು. ಮಂಗಳವಾರ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಇತ್ಯರ್ಥವಾಗಿ ಇಬ್ಬರನ್ನು ಮನೆಗೆ ಕಳಿಸಲಾಗಿತ್ತು. ಅಟೋದಲ್ಲಿ ಕಂಡ್ಲೂರು ಸೇತುವೆಯಲ್ಲಿ ಬರುತ್ತಿರುವಾಗ ತುಸು ರಿಕ್ಷಾ ನಿಲ್ಲಿಸಲು ಹೇಳಿದ ಹರೀಶ ರಿಕ್ಷಾದಿಂದ ಇಳಿದು ನದಿಗೆ ಹಾರಿದ್ದರು,
ಠಾಣಾಧಿಕಾರಿ ನೂತನ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆದಿತ್ತು.