ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಗರದ ಖಾರ್ವಿಕೇರಿಯ ಕೆಳಕೇರಿ ಬಸವ ಖಾರ್ವಿ ಎಂಬುವರ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮಮನೆ ಸಂಪೂರ್ಣ ಹಾನಿಗೀಡಾಗಿದ್ದಲ್ಲದೇ ಮನೆಯೊಳಗಿದ್ದ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಬುಧವಾರ ನಡೆದಿದೆ.
ವಿಪರೀತ ಗಾಳಿ ಮಳೆಯಿಂದಾಗಿ ಕುಸಿದ ಮರ ಮನೆಯ ಮೇಲೆ ಬಿದ್ದಿದೆ. ಆ ಸಂದರ್ಭ ಅಲ್ಲಿಯೇ ಇದ್ದ ಬಸವ ಖಾರ್ವಿ, ಮಾಲತಿ, ಗೌರಿ ಎಂಬುವರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶೋಭಾ ಲಕ್ಷ್ಮಿ, ವೃತ್ತ ನಿರೀಲ್ಷಕ ನಂದಕುಮಾರ್ ಭೇಟಿ ನೀಡಿಪರಿಶೀಲನೆ ನಡೆಸಿದ್ದಾರೆ.