ಕುಂದಾಪುರ :ದೇಶದ ಬಾವುಟ ಸೈನಿಕರ ಉಸಿರಿನಿಂದ ಹಾರಾಡುತ್ತದೆ – ಆದರ್ಶ್ ಗೋಖಲೆ

0
367

ಕುಂದಾಪುರದಲ್ಲಿ ಕಾರ್ಗಿಲ್ ವಿಜಯ ದಿವಸ್, ಪಂಜಿನ ಮೆರವಣಿಗೆ

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ದೇಶದ ಬಾವುಟ ಗಾಳಿಯ ಚಲನೆಯಿಮದ ಹಾರಾಡುತ್ತಿಲ್ಲ. ಅದು ದೇಶ ಕಾಯುವ ಸೈನಿಕರ ುಸಿರಿನಿಂದ ಹಾರಾಡುತ್ತಿದೆ ಎನ್ನುವ ಸತ್ಯ ದೇಶದ ಎಲ್ಲಾ ಪ್ರಜೆಗಳಿಗೂ ಅರ್ಥವಾಗಬೇಕಿದೆ. ಧೀರ ಹುತಾತ್ಮ ಶ್ರೇಷ್ಟ ಸೈನಿಕರನ್ನೆಲ್ಲ ನೆನಪು ಮಾಡಿಕೊಳ್ಳುವುದರ ಜೊತೆಗೆ, ಅವರ ಆದರ್ಶಗಳನ್ನು, ಅವರ ಬಲಿದಾನಗಳನ್ನು, ಅವರ ಉದಾತ್ತ ಚಿಂತನೆಗಳನ್ನು ಮನೆಯ ಮಕ್ಕಳಿಗೆ ತಲುಪಿಸುವುದೇ ಕಾರ್ಗಿಲ್ ವಿಜಯ ದಿವಸ್ ಗುರಿ ಎಂದು ವಾಗ್ಮಿ ಆದರ್ಶ್ ಗೋಖಲೆ ಹೇಳಿದರು. ಬಿಜೆಪಿ ಯುವ ಮೋರ್ಚ ಕುಂದಾಪುರ ವತಿಯಿಂದ ಕಾರ್ಗಿಲ್ ವಿಜಯೋತ್ಸವ 25ರ ಪಂಜಿನ ಮೆರವಣಿಗೆ ಮತ್ತು ವೀರ ಯೋಧ ನಮನದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ಪಂಜಿನ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ದೇಶದ ಪ್ರತಿ ಪ್ರಜೆಯು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಅದರಲ್ಲೂ ಯುವಕರು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಇಂದಿನ ಯುವಕರು ದೇಶಕ್ಕೆ ಸಲ್ಲಿಸುವ ಸೇವೆ ಅಮೂಲ್ಯವಾಗಿರುತ್ತದೆ ಎಂದರು.

ಇದೇ ವೇಳೆ ಕಾರ್ಗಿಲ್ ಯುದ್ಧದ ಸಂಭ್ರಮದಲ್ಲಿ ಹೋರಾಡಿದ ನಿವೃತ್ತ ಸೈನಿಕರಾದ ಗಣಪತಿ ಖಾರ್ವಿ ಬಸ್ರೂರು,, ಹವಾಲ್ದಾರ್ ಯೋಗೇಶ್ ಕಾಂಚನ್ ಕೋಟ, ಸುಧೀರ್ ಎಚ್.ರನ್ನು ಸನ್ಮಾನಿಸಲಾಯಿತು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್.ಕೆ..ಎಸ್,, ರಾಜ್ಯ ಓಬಿಸಿ ವಿಠ್ಠಲ್ ಪೂಜಾರಿ ಐರೋಡಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಖಾರ್ವಿ ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ವಂದೇ ಮಾತರಂ ಹಾಡಿದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಸ್ತಾವಿಸಿದರು. ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ವಿಜಯ ದಿವಸದ ಮಹತ್ವ ಸಾರಿದರು. ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಪ್ರಸಾದ್ ಬಿಲ್ಲವ ನಿರೂಪಿಸಿದರು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಪತ್ ಶೇರಿಗಾರ್ ವಂದಿಸಿದರು. ಕುಂದಾಪುರ ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚದ ಸರ್ವ ಪದಾಧಿಕಾರಿಗಳು, ಸಂಘಟನೆಯ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು, ದೇಶಾಭಿಮಾನಿಗಳು ಈ ವೇಳೆ ಹಾಜರಿದ್ದರು. ಕಾರ್ಯಕ್ರಮಕ್ಕೆ ಮೊದಲು ನಡೆದ ಪಂಜಿನ ಮೆರವಣಿಗೆಯಲ್ಲಿ 15ಕ್ಕೂ ಮಿಕ್ಕಿ ನಿವೃತ್ತ ಸೈನಿಕರು ಭಾಗಿಯಾಗಿ ಮೆರಗು ನೀಡಿದರು

Click Here

LEAVE A REPLY

Please enter your comment!
Please enter your name here