ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಜೀವಿಗಳ ಉಳಿವು, ಪರಿಸರ ಸಂರಕ್ಷಣೆ ಮತ್ತು ವಾತಾವರಣದ ಸಮತೋಲನ ಕಾಪಾಡುವಲ್ಲಿ ಗಿಡಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಕುಂದಾಪುರ ರೂರಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕುಂಭಾಶಿ ಗ್ರಾಮ ಪಂಚಾಯತ್, ರೋಟರಿ ಸಮುದಾಯದಳ ಕೊರವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರೀನ್ ಚಾಲೆಂಜ್ ಪರಿಸರ ಸಂರಕ್ಷಣೆಯ ಅಂಗವಾಗಿ ಗಿಡ ನಡೆಯುವ ಮೂಲಕ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಆಮ್ಲಜನಕವನ್ನು ಬಿಡುಗಡೆ ಮಾಡುವ ಮೂಲಕ ಮಾನವರ ಜೀವಗಳನ್ನು ಉಳಿಸುವ ಪ್ರಮುಖ ವಸ್ತುಗಳಲ್ಲಿ ಗಿಡವು ಒಂದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೂರಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಕುಂದಾಪುರ ಪ್ರಾಂಶುಪಾಲರಾದ ಡಾ. ಎಸ್.ಜಿ .ಪ್ರಸನ್ ಐತಾಳ್ ಮಾತನಾಡಿ ಭವಿಷ್ಯದ ಪೀಳಿಗೆಯ ಉತ್ತಮ ಆರೋಗ್ಯ, ಸಾಕಷ್ಟು ಮಳೆ ಮತ್ತು ಮಾಲಿನ್ಯವನ್ನು ತಡೆಯಲು ಮರಗಳನ್ನು ಬೆಳೆಸುವುದು ಹೆಚ್ಚು ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ, ಕುಂದಾಪುರ ವಲಯ ಅರಣ್ಯಧಿಕಾರಿ ರಾಘವೇಂದ್ರ ಎಂ.ನಾಯಕ್, ಗೋಪಾಡಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಶೆಟ್ಟಿ ಬೀಜಾಡಿ, ಕೊರವಾಡಿ ರೋಟರಿ ಸಮುದಾಯದ ಳದ ಅಧ್ಯಕ್ಷ ಕೆ.ಪಿ.ನರಸಿಂಹ ಬುಧ್ಯ, ಕುಂಭಾಶಿ ಗ್ರಾ.ಪಂ.ಪಿಡಿಓ ಜಯರಾಮ ಶೆಟ್ಟಿ, ಕುಂಭಾಶಿ ಗ್ರಾಮ ಪಂಚಾಯತ್ ಸದಸ್ಯೆ ರಾಧಾದಾಸ್ ,ಕಾಲೇಜಿನ ಆಡಳಿತ ಅಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ದ್ರವ್ಯ ಗುಣ ವಿಭಾಗ ಮುಖ್ಯಸ್ಥ ಡಾ. ಹರಿಪ್ರಸಾದ್ ಶೆಟ್ಟಿ, ಡಾ!! ರಾಘವೇಂದ್ರ, ಡಾ. ಹೇಮಾ ಮತ್ತು ಅರ್ಜುನ್ ದಾಸ್ ಹಾಗೂ ಶ್ರೀನಿಧಿ ಉಪಾಧ್ಯಾಯ ಮತ್ತು ಕಾಲೇಜಿನ ವಿದ್ಯಾರ್ಥಿಗಳು, ಕೊರವಡಿ ಮತ್ತು ಕುಂಭಾಶಿ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಸ್ತ್ರೀ ರೋಗ ತಜ್ಞ ಡಾ. ಕಲ್ಮಾಡಿ ಸತೀಶ್ ಕಾಮತ್ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತ ಮಧುಸೂದನ ಹೇರೂರು ಬ್ರಹ್ಮಾವರ ಇವರಿಗೆ ಸನ್ಮಾನಿಸಲಾಯಿತು.
ಆಯುರ್ವೇದಿಕ್ ಕಾಲೇಜಿನ ದ್ರವ್ಯ ಗುಣ ವಿಜ್ಞಾನ ವಿಭಾಗದ ವತಿಯಿಂದ ಆನೆಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನ ಕುಂಭಾಶಿ ಇದರ ಆಡಳಿತ ಮೊಕ್ತೇಸರಾದ ರಮಣ ಉಪಾಧ್ಯಾಯರು ಮತ್ತು ಕುಂದಾಪುರ ಶಾಸಕರ ಜೊತೆಗೂಡಿ ವಿವಿಧ ಬಗೆಯ ಆಯುರ್ವೇದಿಕ್ ಔಷಧೀಯ ಗುಣವುಳ್ಳ ಸಸ್ಯಗಳನ್ನು ದೇವಸ್ಥಾನದ ಆವರಣದಲ್ಲಿ ನೆಡಲಾಯಿತು. ಆಯುರ್ವೇದಿಕ್ ವಿದ್ಯಾರ್ಥಿಗಳಿಂದ ಕೊರವಾಡಿ ಹಾಗೂ ಕುಂಭಾಶಿ ಪಂಚಾಯಿತಿನ ವ್ಯಾಪ್ತಿ ಭಾಗದಲ್ಲಿ 300ಕ್ಕೂ ಮಿಕ್ಕಿ ಗಿಡಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆಡಲಾಯಿತು.
ಕಾರ್ಯಕ್ರಮವನ್ನು ಡಾ. ಸವಿತಾ.ಪಿ.ಐತಾಳ್ ಸ್ವಾಗತಿಸಿ, ಶ್ವೇತಾ ಉಪಾಧ್ಯಾಯ ವಂದಿಸಿದರು. ಸುಪ್ರೀತಾ ಪುರಾಣಿಕ್ ಕಾರ್ಯಕ್ರಮವನ್ನು ನಿರೂಪಿಸಿದರು.