ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರೋಟರಿ ಮಿಡ್ ಟೌನ್ ಕುಂದಾಪುರದ ಆಶ್ರಯದಲ್ಲಿ ಸರ್ಕಾರಿ ಪ್ರೌಢ ಶಾಲೆ ಕಾಳಾವರದ ಇಂಟ್ರ್ಯಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ಜರಗಿತು. ರೋಟರಿ ಮಿಡ್ ಟೌನ್ ಅಧ್ಯಕ್ಷ ಶೇಖರ್ ಎನ್. ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ 2024-25 ನೆಯ ಸಾಲಿನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು.
ಇಂಟ್ರ್ಯಾಕ್ಟ್ ಕ್ಲಬ್ ನ ಚೇರ್ಮೇನ್ ರೊ. ಚಂದ್ರಶೇಖರ ಹೆಗ್ಡೆ ಇಂಟ್ರ್ಯಾಕ್ಟ ಸಂಸ್ಥೆಯ ಹಿನ್ನಲೆ, ಉದ್ದೇಶಗಳನ್ನು ಮಕ್ಕಳಿಗೆ ತಿಳಿಸಿದರು.
ರೊ. ರಂಜಿತ್ ಕುಮಾರ್ ಶೆಟ್ಟಿಯವರು ಶಾಲಾ ಅತ್ಯುತ್ತಮ ಸಾಧನೆಗೆ ಶಿಕ್ಷಕರ ಪರಿಶ್ರಮ ಕಾರಣ ಹಾಗೂ ಉತ್ತಮ ಫಲಿತಾಂಶ ನೀಡುವಲ್ಲಿ ಮಕ್ಕಳ ಸಾಧನೆಗೆ ಅಭಿನಂದನೆ ತಿಳಿಸಿದರು.
ಇದೇ ಸಂದರ್ಭದಲ್ಲಿ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ತಲಾ ಈರ್ವರನ್ನು ರೋಟರಿ ಮಿಡ್ ಟೌನ್ ಕುಂದಾಪರ ಪ್ರೋತ್ಸಾಹ ಧನ ನೀಡಿ ಗೌರವಿಸಿತು. ಅತಿಥಿಗಳ ಸಾಲಿನಲ್ಲಿ ಮುಖ್ಯ ಶಿಕ್ಷಕ ಗಣೇಶ ಶೆಟ್ಟಿಗಾರ್ ಶಾಲೆ ಆರಂಭವಾದ ದಿನದಿಂದ ರೋಟರಿ ಮಿಡ್ ಟೌನ್ ಸಂಸ್ಥೆಯು ಶಾಲೆಗೆ ನೀಡಿದೆಲ್ಲಾ ಕೊಡುಗೆಗಳನ್ನು ನೆನಪಿಸಿ ಕೃತಜ್ಞತೆ ಅರ್ಪಿಸಿದರು.
ಶಾಲೆಗೆ ಆವಶ್ಯಕವಿರುವ” ಸ್ಮಾರ್ಟ ಬೋರ್ಡ್” ನ ಬೇಡಿಕೆಯನ್ನು ಸಲ್ಲಿಸಿದರು. ರೋಟರಿ ಸಂಸ್ಥೆಯಿಂದ ವನಮಹೋತ್ಸವ ಕಾರ್ಯಕ್ರಮವನ್ನೂ ಇದೇ ದಿನ ಆಚರಿಸಲಾಯಿತು.
ಇಂಟ್ರ್ಯಾಕ್ಟ ನ ನಿರ್ಗಮನ ಅಧ್ಯಕ್ಷ ರಶ್ವಿನ್ ನಿರ್ಗಮನ ಭಾಷಣ ನೀಡಿದರೆ ಕಾರ್ಯದರ್ಶಿ ಶಾಂತಕುಮಾರಿ ಹಿಂದಿನ ಸಾಲಿನ ಕ್ಲಬ್ ನ ಚಟುವಟಿಕೆಗಳ ಸಂಕ್ಷಿಪ್ತ ವರದಿ ಮಂಡಿಸಿದರು. ಪ್ರಸ್ತುತ ಸಾಲಿನ ಅಧ್ಯಕ್ಷ ಮನೋಜ್ 2024-25 ನೇ ಸಾಲಿನ ಇಂಟ್ರ್ಯಾಕ್ಟ್ ಕ್ಲಬ್ ನ ಪದಾಧಿಕಾರಿಗಳ ಪರಿಚಯ ಮಾಡಿಸಿದರು ಕಾರ್ಯದರ್ಶಿ ನಿಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ರೊ. ಶಂಕರ ಶೆಟ್ಟಿ, ರೊ. ಅಬ್ದುಲ್ ಬಶೀರ್, ರೊ. ಶ್ರೀಕಾಂತ ಶೆಟ್ಟಿ ಮುಂತಾದವರು ಭಾಗಿಯಾಗಿದ್ದರು. ರೋಟರಿ ಮಿಡ್ ಟೌನ್ ನ ಕಾರ್ಯದರ್ಶಿ ರೊ.ಉದಯ ಶೆಟ್ಟಿ ವಂದಿಸಿದರು. ಕ್ಲಬ್ ನ ಮಾರ್ಗದರ್ಶಿ ಶಿಕ್ಷಕ ದಿನೇಶ ಪ್ರಭು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಅನ್ವಿತಾ ಶೆಟ್ಟಿ ನಿರೂಪಿಸಿದರು.