ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು
ಎಂ ಬಿ ಏ ವಿಭಾಗದ ವತಿಯಿಂದ ವಿಸ್ತರಣಾ ಚಟುವಟಿಕೆಯನ್ನು ಜುಲೈ 29 ರಂದು ಆಯೋಜಿಸಲಾಗಿತ್ತು. ಎಂಐಟಿ ಕಾಲೇಜಿನ ಪ್ರಾಧ್ಯಾಪಕರು ಹಾಗು ಸುಮಾರು 30 ವಿದ್ಯಾರ್ಥಿಗಳು “ವಿದ್ಯಾ ಅಕಾಡೆಮಿಗೆ” ತೆರಳಿ ಅಲ್ಲಿನ ಮಕ್ಕಳಿಗೆ ಹಲವಾರು ಶೈಕ್ಷಣಿಕ ಮತ್ತು ಶಿಕ್ಷಣೇತರ ಚಟುವಟಿಕೆಗಳನ್ನು ಹಮ್ಮಿಕೊಂಡರು.
ವಿಸ್ತರಣಾ ಚಟುವಟಿಕೆಯಲ್ಲಿ ಮಕ್ಕಳಿಗೆ ವಿವಿಧ ರೀತಿಯ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳು ಆಟಗಳ ಮೂಲಕ ಮಕ್ಕಳ ಸೃಜನಶೀಲತೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಪ್ರೋತ್ಸಾಹಿಸಲಾಯಿತು.
ಕರಕುಶಲ ಚಟುವಟಿಕೆ, ನೃತ್ಯ ಹಾಗೂ ಕಥೆ ಹೇಳುವ ಮೂಲಕ ಮಕ್ಕಳ ಮನೋವಿಕಾಸಕ್ಕೆ ಒತ್ತು ನೀಡುವ ಮೂಲಕ ಮಕ್ಕಳು ಹೊಸ ವಿಷಯಗಳನ್ನು ಖುಷಿಯಿಂದ ಕಲಿಯಲು ಪ್ರೇರಿತರಾದರು ಎಂದು ಕಾಲೇಜಿನ ವಿದ್ಯಾರ್ಥಿಗಳು ಹೇಳಿದರು.