ಕೋಟ:ನಾಯಿ ತಪ್ಪಿಸಲು ಹೋಗಿ ನದಿಗೆ ಬಿದ್ದ ಕಾರು – ಪ್ರಾಣಾಪಾಯದಿಂದ‌ ಪಾರು

0
137

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಚಲಿಸುತ್ತಿದ್ದ ಕಾರಿನ ಎದುರು ನಾಯಿ ಅಡ್ಡ ಬಂದುದನ್ನು ತಪ್ಪಿಸಲು ಹೋದ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಯಿಂದಬಕೆಳಗೆ ಬಿದ್ದ ಘಟನೆ ಮಧುವನ ಸಮೀಪದ ಉಪ್ಲಾಡಿ ಸೇತುವೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಚಾಲಕ ಮಧುವನ ನಿವಾಸಿ ಅಬ್ದುಲ್ ರಜಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Click Here

Click Here

ರಜಾಕ್ ತನ್ನ ಆಲ್ಟೋ ಕಾರಿನಲ್ಲಿ ಶನಿವಾರ ಬೆಳಿಗ್ಗೆ ಕೋಟ ಮೂರುಕೈ ಯಿಂದ ಮಧುವನ ಕಡೆಗೆ ಹೋಗುತ್ತಿದ್ದಾಗ ಉಪ್ಲಾಡಿ ಸೇತುವೆ ಮೇಲ್ಭಾಗದಲ್ಲಿ ನಾಯಿಯೊಂದು ಅಡ್ಡ ಬಂದಿದೆ. ನಾಯಿ ಕಾರಿನಡಿ ಬೀಳುತ್ತದೆ ಎಂಬ ಭಯದಲ್ಲಿ ಚಾಲಕ ರಜಾಕ್ ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಉಪ್ಲಾಡಿ ಸೇತುವೆ ಕೆಳಗೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಕಾರು ಮರವೊಂದಕ್ಕೆ ಸಿಕ್ಕಿಕೊಂಡಿದ್ದರಿಂದ ಹೊಳೆಯ ನೀರಿನಿಂದ ಕೂದಲೆಳೆ ಅಂತರದಲ್ಲಿ ಅವಘಡದಿಂದ ಪಾರಾಗಿದೆ.

ಚಾಲಕ ರಜಾಕ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ರಕ್ಷಿಸಿದ್ದಾರೆ. ಬಳಿಕ ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಗಿದೆ.

Click Here

LEAVE A REPLY

Please enter your comment!
Please enter your name here