ಲಯನ್ಸ್ ಅಂತರಾಷ್ಟ್ರೀಯ (ಲಯನ್ಸ್ ಜಿಲ್ಲೆ 317ಸಿ) ತರಬೇತಿ ಕಾರ್ಯಕ್ರಮ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಸೇವಾ ಮನೋಭಾವದಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಲಯನ್ಸ್ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಇಂತಹ ತರಬೇತಿಗಳು ಲಯನ್ಸ್ ಸದಸ್ಯರನ್ನು ಇನ್ನಷ್ಟು ಪ್ರಬುದ್ಧರನ್ನಾಗಿ ಮಾಡುತ್ತದೆ. ಲಯನ್ಸ್ ಜಿಲ್ಲೆಯಲ್ಲಿ ಉತ್ತಮ ಕಾರ್ಯಚಟುವಟಿಕೆಗಳು ನಡೆಯುತ್ತಿದೆ, ಒಳ್ಳೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಲಯನ್ಸ್ ಸೇವಾ ಚಟುವಟಿಕೆಗಳು ಅತ್ಯುತ್ತಮವಾಗಿ ಸ್ವಾಗುತ್ತಿದೆ ಎಂದು ಲಯನ್ ಇದರ ಮಹಾನಿರ್ದೇಶಕ ಮಹಮ್ಮದ್ ಹನೀಫ್ ಹೇಳಿದರು.
ಲಯನ್ಸ್ ಅಂತರಾಷ್ಟ್ರೀಯ (ಲಯನ್ಸ್ ಜಿಲ್ಲೆ 317ಸಿ) ತರಬೇತಿ ಕಾರ್ಯಕ್ರಮ ಕೋಟೇಶ್ವರ ಹಾಲಾಡಿ ರಸ್ತೆಯ ಕಂದಾವರ ಆಡಿಟೋರಿಯಂನಲ್ಲಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಲಯನ್ ಸ್ವಪ್ನ ಸುರೇಶ್, ಲಯನ್ ರಾಜೀವ್ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು.
ಲಯನ್ ಎನ್.ಎಮ್.ಹೆಗ್ಡೆ, ಲಯನ್ ಈಆರ್ ರಮಾನಂದ್, ಲಯನ್ ಪ್ರಕಾಶ್ ಬೆಟ್ಟಿನ್, ಲಯನ್ ಆನಂದ್ ಶೆಟ್ಟಿ ಕಬ್ಬೈಲ್, ಲಯನ್ ನರಸಿಂಹ ದೇವಾಡಿಗ, ಲಯನ್ ಧರ್ಮರಾಜ್ ಮುದಳಿಯಾರ್, ಹೆಚ್ ಬಾಲಕೃಷ್ಣ ಶೆಟ್ಟಿ, ಲಯನ್ ವಸಂತ್ ಕುಮಾರ್ ಶೆಟ್ಟಿ, ಲಯನ್ ಗಿರೀಶ್ ಶ್ಯಾನಬೋಗ್, ಲಯನ್ ಡಾ.ಶಿವಕುಮಾರ್ ಉಪಸ್ಥಿತರಿದ್ದರು.
ಲಯನ್ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿದರು. ಲಯನ್ ಜಗದೀಶ ಶೆಟ್ಟಿ ವಂದಿಸಿದರು. ಸಂಪನ್ಮೂಲ ವ್ಯಕ್ತಿ ಲಯನ್ ವಿ.ಜಿ.ಶೆಟ್ಟಿ ನೂತನ ಪದಾಧಿಕಾರಿಗಳಿಗೆ ತರಬೇತಿ ನೀಡಿದರು.