ಕುಂದಾಪುರ ಮಿರರ್ ಸುದ್ದಿ…
ಕೋಟ: ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಇವರ ವತಿಯಿಂದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಹಾಗೂ ವಿದ್ಯಾರ್ಥಿ ವೇತನ ಮತ್ತು ಗುರಿಕಾರರಿಗೆ ಗೌರವ ಧನ ವಿತರಣೆ ಕಾರ್ಯಕ್ರಮ ಭಾನುವಾರ ಕರಾವಳಿ ಮೊಗವೀರ ಸಭಾ ಭವನ ಸಾಲಿಗ್ರಾಮದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಉದ್ಘಾಟಿಸಿದರು.
ಕೋಟ ಕರಾವಳಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಆನಂದ ಸಿ ಕುಂದರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕೋಟ ಹಾಗೂ ಸಾಲಿಗ್ರಾಮ ವ್ಯಾಪ್ತಿಯ ಗುರಿಕಾರಿಗೆ ಗೌರವಧನ ನೀಡಿ ಗೌರವಿಸಲಾಯಿತು. ಈ ವೇಳೆ ಕೃಷ್ಣಮೂರ್ತಿ ಮರಕಾಲರು ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ದಶವರ್ಷಗಳ ಸೇವೆಯನ್ನು ಗುರುತಿಸಿ ವಿಶೇಷ ಅಭಿನಂದನೆ ಸಲ್ಲಿಸಿತು. ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ನಾಗಶ್ರೀ ಡಾ. ಕೃಷ್ಣ ಕಾಂಚನ್ ಕೃಷ್ಣಮೂರ್ತಿ ಮರಕಾಲ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ದ.ಕ ಮೊಗವೀರ ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ.ಸಿ.ಕೋಟ್ಯಾನ್, ಬಾರ್ಕುರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಸತೀಶ್ ಅಮೀನ್ ,ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ಮಾತಾ ಆಸ್ಪತ್ರೆ ಕುಂದಾಪುರ ಮನೋವೈದ್ಯ ಡಾ. ಪ್ರಕಾಶ್ ತೋಳಾರ್ , ಚಾರ್ಟೆಡ್ ಅಕೌಂಟೆಂಟ್ ಪದ್ಮನಾಭ ಕಾಂಚನ್ ,ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್, ಕೋಟ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ಉಪಸ್ಥಿತರಿದ್ದರು. ಮಹಾಜನ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಮರಕಾಲ ಪ್ರಾಸ್ತಾವನೆ ಸಲ್ಲಿಸಿದರು.
ನಿಯೋಜಿತ ಕಾರ್ಯದರ್ಶಿ ಚಂದ್ರ ಬಂಗೇರ ಸ್ವಾಗತಿಸಿ, ಸಂಘಟನೆಯ ಪ್ರಮುಖರಾದ ಶಿವರಾಮ್.ಕೆ.ಎಮ್ ನಿರೂಪಿಸಿ, ಕೃಷ್ಣ ಶ್ರೀಯಾನ್ ವಂದಿಸಿದರು.