ಕುಂದಾಪುರ: ಆಗಸ್ಟ್ 10, 11 ಕರ್ನಾಟಕ ಸ್ಟೇಟ್ ಸ್ಕೂಲ್ಸ್ ಚೆಸ್ ಚಾಂಪಿಯನ್ ಶಿಪ್-2024

0
130

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕರ್ನಾಟಕ ಸ್ಟೇಟ್ ಸ್ಕೂಲ್ಸ್ ಚೆಸ್ ಚಾಂಪಿಯನ್ ಶಿಪ್-2024 ಆಗಸ್ಟ್ 10 ರಿಂದ 11ರವರೆಗೆ ಯುವ ಮೆರಿಡಿಯನ್ ಕನ್ವೆನ್ನನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಅಶ್ವಿ ಚೆಸ್ ಸ್ಕೂಲ್ ಕುಂದಾಪುರ ಇದರ ಸ್ಥಾಪಕಾಧ್ಯಕ್ಷ ನರೇಶ್ ಬಿ ಹೇಳಿದರು. ಅವರು ಬುಧವಾರ ಕುಂದಾಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದರು.

Click Here

ಕಾರ್ಯಕ್ರಮವು ಯುವ ಮೆರಿಡಿಯನ್ ಕನ್ವೆನ್ನನ್ ಸೆಂಟರ್ ಕುಂದಾಪುರ ಮತ್ತು ಕಶ್ವಿ ಚೆಸ್ ಸ್ಕೂಲ್ (ರಿ.) ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಹಾಗೂ ಕರ್ನಾಟಕ ರಾಜ್ಯ ಚೆಸ್‌ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ ಸಹಯೋಗದೊಂದಿಗೆ ನಡೆಯಲಿದೆ ಎಂದ ಅವರು, ಪಠ್ಯ ಕ್ರಮ ಸ್ಟೇಟ್, ಸಿ.ಬಿ.ಎಸ್.ಇ, ಐ.ಸಿ.ಎಸ್.ಇ ಹಾಗೂ ಇತರೆಬವಯೋಮಿತಿಯ 7,9,11,13,15, ಮತ್ತು 17 ರ ಹುಡುಗ ಮತ್ತು ಹುಡುಗಿಯರ ಎಲ್ಲಾ ವಿಭಾಗದಲ್ಲಿ ಪ್ರತ್ಯೇಕವಾಗಿ ಚೆಸ್ ಚಾಂಪಿಯನ್ ಶಿಪ್ ನಡೆಯಲಿದ್ದು ಪ್ರತಿ ವಯೋಮಿತಿಯ ವಿಭಾಗದಲ್ಲಿ ಒಬ್ಬ ವಿಜೇತರಾದವರು ಪಂಜಾಬ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಕೂಲ್ಸ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 600 ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಕಾರ್ಯದರ್ಶಿಗಳಾದ ಪುರುಷೋತ್ತಮ ಕಾಮತ್ ಕೋಶಾಧಿಕಾರಿ ಅಣ್ಣಪ್ಪ ದೇವಾಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here