ಕುಂದಾಪುರ: ಹಿರಿಯ ಪತ್ರಕರ್ತ ಜಯಕರ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಭೆ

0
99

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಹಿರಿಯ ಪತ್ರಕರ್ತರಾಗಿ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದ ಜಯ ಕರ ಸುವರ್ಣ ಅವರು ಸರಳ ವ್ಯಕ್ತಿತ್ವದ ಸಜ್ಜನ ವರದಿಗಾರ ಎಂದು ಹೆಸರಾದವರು. ಅವರ ಜೀವನದಲ್ಲಿ ಹಮ್ಮುಬಿಮ್ಮಿಲ್ಲದೆ ಎಲ್ಲರೊಂದಿಗೆ ಬೆರೆತು ಸಾಮಾಜಿಕ ಬದ್ಧತೆಯನ್ನು ಮೆರೆದವರು ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಹೇಳಿದರು.

ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ದಿವಂಗತ ಜಯಕರ ಸುವರ್ಣ ಅವರ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Click Here

ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇದರ ಸಕ್ರಿಯ ಸದಸ್ಯರಾಗಿದ್ದ ಜಯಕರ ಸುವರ್ಣ ಅವರು ಸಮಾಜದ ಹಿತಚಿಂತಕರಾಗಿದ್ದರು ಎಂದು ಪತ್ರಕರ್ತ ಸಂತೋಷ್ ಕುಂದೇಶ್ವರ ಹೇಳಿದರು.

ಈ ಸಂದರ್ಭ ದಿವಂಗತ ಜಯಕರ ಸುವರ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬಳಿಕ ಒಂದು ನಿಮಿಷ ಮೌನಚರಣೆ ಮಾಡಿ ಸದ್ಗತಿ ಕೋರಲಾಯಿತು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಪತ್ರಕರ್ತರ ಮಹಾಸಭೆಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here