ಕೋಟ- ಹೊಳೆ ಹೂಳೆತ್ತುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ, ಸಹಸ್ರ ಸಂಖ್ಯೆಯಲ್ಲಿ ರೈತಾಪಿ ವರ್ಗ ಭಾಗಿ, ಸ್ಥಳಕ್ಕೆ ಡಿಸಿ ಭೇಟಿ ಉಪವಾಸ ಕೈಬಿಡುವಂತೆ ಮನವಿ

0
95

ಕುಂದಾಪುರ ಮಿರರ್ ಸುದ್ದಿ…

ಕೋಟ: ನಾವು ಮುಗ್ಧ ರೈತಾಪಿ ವರ್ಗವಾಗಿದ್ದೇವೆ ಇಲ್ಲಿ ಎಷ್ಟು ಸಮಸ್ಯೆ ಆದರೂ ಪ್ರತಿಭಟಿಸುವ ಮನಸ್ಥಿತಿ ಇಲ್ಲ ಅಸಹಾಯಕ ವ್ಯವಸ್ಥೆ, ಯಾವುದೇ ಸರಕಾರ ಇದ್ದರೂ ರೈತರ ಪರವಾಗಿ ಇರುತ್ತದೆ ಎಂಬ ನಂಬಿಕೆ ಅದರಲ್ಲೆ ರೈತ ಸಮುದಾಯ ಜೀವನ ಕಳೆಯುವಂತ್ತಾಗಿದೆ ರೈತರ ನೋವು ಆಲಿಸುವರು ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ ಇದಕ್ಕೆ ಪ್ರತಿಭಟನೆಯೇ ದಾರಿಯಾಗಿದೆ ಎಂದು ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಶ್ಚಂದ್ರ ಶೆಟ್ಟಿ ಹೇಳಿದರು.

ಬುಧವಾರ ಕೋಟದ ಹಿರೇ ಮಹಾಲಿಂಗೇಶ್ವರ ದೇಗುಲದ ಸನಿಹದಲ್ಲಿ ತೆಕ್ಕಟ್ಟೆ,ಕೋಟದ ಗಿಳಿಯಾರು, ಚಿತ್ರಪಾಡಿ ಕಾರ್ಕಡದವರೆಗೆ ಹೊಳೆಹೂಳಿನ ಸಮಸ್ಯೆಯಿಂದ ಕೃತಕ ನೆರೆ ಸೃಷ್ಟಿಯಾಗಿದ್ದು ರೈತರು ಬೆಳೆದ ಕೃಷಿ ಕೊಳೆಯುತ್ತಿರುವ ಹಿನ್ನಲ್ಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಹೊಳೆಯ ಹೂಳೆತ್ತಬೇಕು ಎಂದು ಆಗ್ರಹಿಸಿ ಕೋಟದ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ನಡೆದ ಧರಣಿ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿ ಸರಕಾರ ಸೌಲಭ್ಯಗಳನ್ನು ನೀಡುತ್ತದೆ,ರೈತರ ಭಾವನೆಗಳ ಮುಟಿಸಲು ಜನಪ್ರತಿನಿಧಿಗಳಿದ್ದಾರೆ, ತಪ್ಪು ನಾವು ಅಥವಾ ಸರಕಾರ ಮಾಡುತ್ತದೆ ಎಂಬ ಗೊಂದಲದಲ್ಲಿ ನಾವಿರುವಂತ್ತಾಗಿದೆ ಆದರೆ ಅದನ್ನು ಪ್ರತಿಭಟಿಸವಂತೆ ಮಾಡುವುದಿಲ್ಲ ,ಸರಕಾರವನ್ನು ಎಚ್ಚರಿಸುವ ಕಾರ್ಯ ಮಾಡಬೇಕು,ನಾವು ನಿಮ್ಮ ಜತೆ ಇದ್ದೇವೆ ಎಂದು ಧೈರ್ಯ ತುಂಬಿದರು.

ಯಾಂತ್ರಿಕ ಕೃಷಿ ಕಾಯಕದ ನಡುವೆ ನಿರ್ಲಕ್ಷೀಯ ದೋರಣೆ ನಮ್ಮನ್ನು ಕಾಡುತ್ತದೆ ಇದೇ ನಮ್ಮ ವೈಫಲ್ಯ, ನಾವು ನಮ್ಮ ಸಮಸ್ಯೆಗಳನ್ನು ಇಲ್ಲಿಗೆ ಬಿಡಬಾರದು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಮಾಡಬೇಕು,ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಲವು ದಾರಿಗಳಿವೆ,ಇಲಾಖೆ ಮಾಡದಿದ್ದ ಕಾರ್ಯವನ್ನು ಪಂಚಾಯತ್ ಮಾಡಬಹುದು,ವಾರಾಹಿ ಯೋಜನೆ ಸಮರ್ಪಕ ಅನುಷ್ಠಾನ ಆಗಿಲ್ಲ,ಆಗಿದ್ದರೆ ಅದರಿಂದ ತುಂಬಾ ಅನುಕೂಲ,ನೀವು ನಿಮ್ಮ ಧ್ವನಿ ಎತ್ತಬೇಕು,ನೊಂದವರ ಹೋರಾಟದಿಂದ ಮಾತ್ರ ಬೆಳಕು ಕಾಣಲು ಸಾಧ್ಯ ,ಗುತ್ತಿಗೆದಾರರು ಲಾಭಕ್ಕಾಗಿ ಯೋಜನೆ ಅನುಷ್ಠಾನ ಸಲ್ಲ ಮೂಲಭೂತ ಅವಶ್ಯಕತೆಗಳ ಬಗ್ಗೆ ಗಮನ ಹರಿಸಬೇಕು, ನಿಮ್ಮ ಹೋರಾಟ ಇದೇ ರೀತಿ ಇದ್ದರೆ ನಾವು ನಿರಂತರ ನಿಮ್ಮ ಜತೆ ಇರುತ್ತೇವೆ, ಇದಕ್ಕೆ ಇತ್ತೀಚಿಗಿನ ಕೃಷಿ ಡಿಪ್ಲೋಮಾ ಕಾಲೇಜು ಜೀವಗೊಳಿಸಲು ಸರಕಾರದ ಕದ ತಟ್ಟಿದ್ದು ಅದು ಯಶಸ್ಸಿನ ಹಂತ ತಲುಪಿದ್ದೇವೆ ಎಂದು ನೆನಪಿಸಿದರು.

ಕಾರ್ಯಕ್ರಮವನ್ನು ಹಿರಿಯ ಕೃಷಿಕರಾದ ಶಾನಾಡಿ ಶ್ರೀನಿವಾಸ ಭಟ್ ಉದ್ಘಾಟಿಸಿದರು.

Click Here

ಕಾರ್ಯಕ್ರಮಕ್ಕೂ ಮುಂಚೆ ಕೋಟ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ದೇಗುಲದಿಂದ ಸತ್ಯಾಗ್ರಹ ಸ್ಥಳಕ್ಕೆ ತಲುಪಲಾಯಿತು. ಅಪರಾಹ್ನ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪವಾಸ ಕೈಬಿಡುವಂತೆ ಮನವಿ ಮಾಡಿದರಲ್ಲದೆ ಸತ್ಯಾಗ್ರಹ ನಿರತರ ಅಹವಾಲುಗಳನ್ನು ಸ್ವೀಕರಿಸಿದರು. ಅಧಿಕಾರಿಗಳ ಪರವಾಗಿ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ,ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ,ಗ್ರಾಮಲೆಕ್ಕಿಗ ರಾಘವೇಂದ್ರ ಹಕ್ಲಾಡಿ ಇದ್ದರು

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಮಲ್ಯಾಡಿ ಶಿವರಾಮ್ ಶೆಟ್ಟಿ,ಉದ್ಯಮಿ ಆನಂದ್ ಸಿ ಕುಂದರ್,ರೈತ ಮುಖಂಡರಾದ ಜಿ.ತಿಮ್ಮ ಪೂಜಾರಿ,ಕೇದೂರು ರೈತ ಮುಖಂಡ ಸದಾನಂದ ಶೆಟ್ಟಿ,ಗೋಪಾಲ್ ಪೈ,ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್,ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ,ಕೋಟ ಸಹಕಾರಿ ನಿರ್ದೇಶಕರಾದ ರವೀಂದ್ರ ಕಾಮತ್,ರಂಜೀತ್ ಕುಮಾರ್,ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ,ಕೋಟ ರೈತ ಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ್ ಶೆಟ್ಟಿ,ಹೋರಾಟ ಸಮಿತಿಯ ಪ್ರಮುಖರಾದ ನಾಗರಾಜ್ ಗಾಣಿಗ,ತಿಮ್ಮ ಕಾಂಚನ್,ಮಹೇಶ್ ಶೆಟ್ಟಿ, ಗಿರೀಶ್ ದೇವಾಡಿಗ,ಬೋಜ ಪೂಜಾರಿ,ಸುಭಾಷ್ ಶೆಟ್ಟಿ,ಭಾಸ್ಕರ್ ಶೆಟ್ಟಿ,ಕೋ.ಗಿ.ನಾ,ಸಿದ್ಧ ದೇವಾಡಿಗ,ಮಹಾಬಲ ಪೂಜಾರಿ,ಶ್ರೀನಾಥ ಶೆಟ್ಟಿ ತೆಕ್ಕಟ್ಟೆ, ಗಿರೀಶ್ ಗಾಣಿಗ ಬೆಟ್ಲಕ್ಕಿ,ಕಿರಣ್ ಕುಂದರ್,ರವೀಂದ್ರ ಶೆಟ್ಟಿ ದ್ಯಾವಸ,ರಮೇಶ್ ಮೆಂಡನ್ ಸಾಲಿಗ್ರಾಮ, ಜಗನಾಥ್ ಪೂಜಾರಿ, ಅಚ್ಯುತ್ ಪೂಜಾರಿ,ಬಾಬು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಪ್ರಮುಖ ಟಿ.ಮಂಜುನಾಥ್ ಗಿಳಿಯಾರು ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸಮಿತಿ ಪ್ರಮುಖರಾದ ಕೀರ್ತೀಶ್ ಪೂಜಾರಿ ಸ್ವಾಗತಿಸಿ ನಿರೂಪಿದರು.

ಪೋಲಿಸ್ ಸರ್ಪಗಾವಲು
ಸತ್ಯಾಗ್ರಹದಲ್ಲಿ ಜಿಲ್ಲಾ ಹೆಚ್ಚುವರಿ ಪೋಲಿಸ್ ತಂಡದಿಂದ ಬಿಗಿಬಂದೋಬಸ್ತ ವ್ಯವಸ್ಥೆ ಹಾಗೂ ಆರೋಗ್ಯ ಇಲಾಖೆ ಕಣ್ಗಾವಲು ಕಲ್ಪಿಸಲಾಗಿತ್ತು.

ನಿಮ್ಮ ಉಪವಾಸ ಸತ್ಯಾಗ್ರಹವನ್ನು ಇಲ್ಲಿಗೆ ನಿಲ್ಲಿಸಿ ನಿಮ್ಮ ಬೇಡಿಕೆಗಳನ್ನು ಮುಖ್ಯ ಮಂತ್ರಿಗಳಿಗೆ ಇಂದೆ ಕಳುಹಿಸಲಾಗುವುದು ಹಾಗೇ ಜಿಲ್ಲಾಡಳಿತದಿಂದ ಆಗುವ ಕಾಮಗಾರಿಗಳನ್ನು ನಿರ್ವಹಿಸುತ್ತೇವೆ,ಹೂಳು ತೆಗೆಯುಲು ಬೇಕಾದ ಕ್ರಮಗಳು ಹಾಗೂ ಡ್ಯಾಮ್ ನಿರ್ಮಾಣ,ಬೆಳೆಹಾನಿ ಪ್ಯಾಕೆಜ್ ಬಗ್ಗೆ ಶೀಘ್ರದಲ್ಲಿ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗುವುದು, ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ – ಜಿಲ್ಲಾಧಿಕಾರಿ

ಈ ಭಾಗದಲ್ಲಿ ಆಗುತ್ತಿರುವ ಕೃತಕ ನೆರೆ ಹಾವಳಿಗೆ ಇಲ್ಲಿನ ಹೊಳೆ ಸಾಲುಗಳ ಹೂಳು ಹಾಗೇ ಚಿಕ್ಕ ಚಿಕ್ಕ ಮೊರಿಗಳನ್ನು ತೆರವುಗೊಳಿಸಿ ದೊಡ್ಡ ಸೇತುವೆಗಳನ್ನು ನಿರ್ಮಾಣ ಮಾಡಬೇಕು ಆಗ ಮಾತ್ರ ಈ ನೆರೆ ಹಾವಳಿಗೆ ಕಡಿವಾಣ ಬೀಳಲಿದೆ ಈ ಬಗ್ಗೆ ವಿವಿಧ ಭಾಗಗಳಲ್ಲಿ ಸಾಕಷ್ಟು ಭಾರಿ ಮನವಿ ಪ್ರತಿಭಟನೆಗಳನ್ನು ಮಾಡಿದ್ದೇವೆ ಆದರೆ ಸರಕಾರದ ಜನಪ್ರತಿನಿಧಿಗಳು ನಿರ್ಲಕ್ಷ್ಯಿಯ ದೋರಣೆಗಳನ್ನು ತಳೆದಿದ್ದಾರೆ ಇದು ಸರಿಯಲ್ಲ ಶೀಘ್ರದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆ ಮರಣಾವಾಸ ಉಪವಾಸ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು –
ಟಿ.ಮಂಜುನಾಥ್ ಗಿಳಿಯಾರು ಹೋರಾಟ ಸಮಿತಿಯ ಪ್ರಮುಖರು

LEAVE A REPLY

Please enter your comment!
Please enter your name here