ಗ್ರ್ಯಾಂಡ್ ಮಾಸ್ಟರ್ ಏಶಿಯಾ ಬುಕ್ ಆಫ್ ರೆಕಾರ್ಡ್ಸ್ ಪಡೆದ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧನ್ವಿ ಮರವಂತೆ

0
48

ಕುಂದಾಪುರ ಮಿರರ್ ಸುದ್ದಿ…

ಹೆಮ್ಮಾಡಿ :ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ಅಂತರಾಷ್ಟ್ರೀಯ ಮಟ್ಟದ ಯೋಗ ಪ್ರತಿಭೆ ಧನ್ವಿ ಪೂಜಾರಿ ಮರವಂತೆ ಗ್ರ್ಯಾಂಡ್ ಮಾಸ್ಟರ್ ಏಶಿಯಾ ಬುಕ್ ಆಫ್ ರೆಕಾರ್ಡ್ಸ್ ಪಡೆದಿರುತ್ತಾಳೆ.

Click Here

ಧನ್ವಿ ಕೇವಲ 3 ವರ್ಷಗಳ ಅವಧಿಯಲ್ಲಿ ಎಲ್ಲಾ 23 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತಳಾಗಿ ಗ್ರ್ಯಾಂಡ್ ಮಾಸ್ಟರ್ ಎಂದು ಬಿರುದು ಪಡೆದಿದ್ದಾರೆ. ಅವಳ ಅದ್ಭುತವಾದ ಯೋಗ ಪ್ರದರ್ಶನದಿಂದಾಗಿ ಮಾರ್ಚ್ 27-2024 ರಂದು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನ್ನು ಸ್ವೀಕರಿಸಿದ್ದಾಳೆ. ಇವಳು ಜ್ಯೋತಿ ಹಾಗೂ ಚಂದ್ರಶೇಖರ್ ಮರವಂತೆಯವರ ಪುತ್ರಿ

ಕುಂದಾಪುರ ಮೊಗವೀರ ಭವನದಲ್ಲಿ ನಡೆದ ಜನತಾ ನವನೀತ 2K24 ವೈಭವದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಗಣೇಶ ಮೊಗವೀರರವರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನ್ನು ನೀಡಿ ಗೌರವಿಸಿದ್ದಾರೆ.

Click Here

LEAVE A REPLY

Please enter your comment!
Please enter your name here