ಕೋಟ ಜೀವನ್‌ಮಿತ್ರ ದಶಮ ಸಂಭ್ರಮ – ಸಾಧಕರಿಗೆ ಸಮ್ಮಾನ

0
189

ಕುಂದಾಪುರ ಮಿರರ್ ಸುದ್ದಿ…


ಕೋಟ : ಕೋಟ ಜೀವನ್‌ಮಿತ್ರ ಸೇವಾ ಟ್ರಸ್ಟ್‌ನ ದಶಮ ಸಂಭ್ರಮ ಆ.15 ರಂದು ಕೋಟ ಗಿಳಿಯಾರಿನ ಸಮೀಪ ಸ್ಮಾರ್ಟ್ ಸಿಟಿಯಲ್ಲಿ ನಡೆಯಿತು.

ಶಾಸಕ ಕಿರಣ್‌ಕುಮಾರ್ ಕೊಡ್ಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಜೀವನ್‌ಮಿತ್ರ ಆಂಬುಲೆನ್ಸ್ ಹಾಗೂ ಜೀವನ್‌ಮಿತ್ರ ಸೇವಾ ಟ್ರಸ್ಟ್ ಹತ್ತು ವರ್ಷಗಳಿಂದ
ಸೇವೆ ಸಲ್ಲಿಸುತ್ತಿದ್ದು, ಸಮಾಜದಲ್ಲಿ ಆಶಕ್ತರಿಗೆ ನೆರವಾಗುತ್ತ ಬಂದಿರುವುದು ಸಂತಸದ ವಿಚಾರವಾಗಿದೆ. ಸಂಘಟನೆಯ ಜನಪರ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.

ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಸಂಘಟನೆಗಳು ಹಲವಾರು ಹುಟ್ಟಿಕೊಳ್ಳುತ್ತದೆ. ಆದರೆ ಸಮಾಜಕ್ಕೆ ಎನಾದರು ಕೊಡುಗೆ ನೀಡಬೇಕು ಎನ್ನುವ
ನಿಟ್ಟಿನಲ್ಲಿ ನಿರಂತರವಾಗಿ ಕಾರ್‍ಯ ನಿರ್ವಹಿಸುವ ಸಂಘಟನೆಗಳು ಅಪರೂಪ. ಅಂತಹ ಸಂಘಟನೆಗಳಿಗೆ ಜೀವನ್‌ಮಿತ್ರ ಮಾದರಿ ಎಂದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸುಧೀರ್ ಕುಮಾರ್ ಮುರೊಳಿ ಶುಭ ಹಾರೈಸಿದರು

Click Here

Click Here

ಈ ಸಂದರ್ಭ ಸಾಧಕರಾದ ಇಬ್ರಾಹಿಂ ಗಂಗೊಳ್ಳಿ, ಮಂಜುನಾಥ ನಾಯಕ್, ರವಿ ಬನ್ನಾಡಿ, ದಿನೇಶ್ ಪುತ್ರನ್, ಪ್ರಕಾಶ್ ಗಾಣಿಗ ಸಾಲಿಗ್ರಾಮ, ಮಲ್ಲಿಗೆ ಕೃಷಿಕರಾದ ಪ್ರೇಮಾ ಪೂಜಾರಿ ಕುಂಭಾಶಿ, ಉರಗ ರಕ್ಷಕ ವಿಜಯ ಪೂಜಾರಿ ಬಾರಿಕೆರೆ ಹಾಗೂ ಸ್ಥಳೀಯ ಪತ್ರಕರ್ತರಾದ ರಾಜೇಶ್ ಗಾಣಿಗ ಅಚ್ಲಾಡಿ, ರವೀಂದ್ರ ಪೂಜಾರಿ ಕೋಟ, ಪ್ರಭಾಕರ್ ಆಚಾರ್ಯ ಚಿತ್ತೂರು, ಚಂದ್ರಶೇಖರ ಬೀಜಾಡಿ, ಇಬ್ರಾಹಿಂ ಪಡುಕರೆ, ಶೇಷಗಿರಿ ಭಟ್ ಅರೂರು ಇವರನ್ನು ಸಮ್ಮಾನಿಸಲಾಯಿತು.

ಅಶಕ್ತರಿಗೆ ನೆರವು, ನೇತ್ರದಾನ ಶಿಬಿರ, ಕಂಬಳ, ಫೋಟೋಗ್ರಫಿ ಸ್ಪರ್ಧೆ ನಡೆಯಿತು.

ಹೊಸಪೇಟೆಯ ಶ್ರೀಚಂದ್ರ ಮೌಳೇಶ್ವರ ಅವಧೂತರು, ರಂಗಭೂಮಿ ಕಲಾವಿದ ಸುರೇಂದ್ರ ಗಂಗೊಳ್ಳಿ,
ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಶೆಟ್ಟಿ, ಮಣೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್, ಕೋಟ ಗ್ರಾ.ಪಂ. ಉಪಾಧ್ಯಕ್ಷ ಪಾಂಡು ಪೂಜಾರಿ, ಉದ್ಯಮಿ ಆದರ್ಶ ಶೆಟ್ಟಿ, ಶ್ರೀಕಾಂತ್ ಶೆಣೈ, ಜೀವನ್‌ಮಿತ್ರ ಸೇವಾ ಟ್ರಸ್ಟ್ ಪ್ರವರ್ತಕ ನಾಗರಾಜ್ ಪುತ್ರನ್, ಸಹಪ್ರವರ್ತಕ ನಾಗೇಂದ್ರ ಪುತ್ರನ್ ಇದ್ದರು.

ಜೀವನ್‌ಮಿತ್ರ ಸೇವಾ ಟ್ರಸ್ಟ್ ಸದಸ್ಯ ಸುಶಾಂತ್ ಶೆಟ್ಟಿ ಅಚ್ಲಾಡಿ ಸ್ವಾಗತಿಸಿ, ಪತ್ರಕರ್ತ ಪ್ರನುತ್ ಆರ್. ಗಾಣಿಗ, ಪ್ರದೀಪ್ ಗಿಳಿಯಾರು, ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿ, ನಾಗರಾಜ್ ಪುತ್ರನ್ ವಂದಿಸಿದರು

Click Here

LEAVE A REPLY

Please enter your comment!
Please enter your name here