ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿಯಲ್ಲಿ ನಡೆದ 78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸುರೇಶ ಶೆಟ್ಟಿ , ಆಡಳಿತ ಮುಖ್ಯಸ್ಥರು, ಸುಮುಖ ಗ್ರೂಪ್ಸ್ ಇಂಡಸ್ಟ್ರೀಸ್ ಉಪ್ಪುಂದ , ಇವರು ಧ್ವಜಾರೋಹಣ ನೆರವೇರಿಸಿ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಹಾಗೂ ಯುವ ಸಮುದಾಯದ ಮಹತ್ವದ ಕುರಿತು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರಾದ ಡಾ. ಮಂಜುನಾಥ ಗಾಣಿಗ, ಪ್ರದೀಪ ಕುಮಾರ್ ಶೆಟ್ಟಿ, ಸುನೀಲ್ ಚಿತ್ತಾಲ್, ಕಾರ್ತಿಕೇಯ ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ ಕುಮಾರ್ ಆರ್, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸುಜಯ್ ಸ್ವಾಗತಿ, ವಂದಸಿ, ಕಾರ್ಯಕ್ರಮ ನಿರೂಪಿಸಿದರು.