ಕುಂದಾಪುರ ಮಿರರ್ ಸುದ್ದಿ…
ಕೋಟ: ಉತ್ತಮ ಸಾಧನೆಗೈದ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನಕ್ಕೆ ಝೋನಲ್ ಅವಾರ್ಡ್ 2023 -24ರ ಕಾರ್ಯಕ್ರಮದಲ್ಲಿ ಎರಡು ಅವಾರ್ಡ್‍ಗಳು ಲಭಿಸಿದ್ದು ನಿಕಟಪೂರ್ವ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಇವರಿಂದ ನಿಕಟಪೂರ್ವ ಅಧ್ಯಕ್ಷ ಅರವಿಂದ ಶರ್ಮ, ಕಾರ್ಯದರ್ಶಿ ಕರುಣಾಕರ ಶೆಟ್ಟಿ ಸ್ವೀಕರಿಸಿದರು.
ಜಿಲ್ಲಾ ಗವರ್ನರ್ ಸಿಎ ದೇವಾನಂದ್, ಆಲ್ವಿನ್ ಕ್ವಾಡ್ರಸ್, ಪದ್ಮನಾಭ ಕಾಂಚನ್, ರಾಮ್ ದೇವ್ ಕಾರಂತ್ ರಾಜಾರಾಮ್ ಐತಾಳ್, ವಿಜಯ ಶೆಟ್ಟಿ ಕಾಜ್ರಹಳ್ಳಿ,ಗಣೇಶ್ ಕುಮಾರ್ ಉಪಸ್ಥಿತರಿದ್ದರು.