ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಅದ್ಭುತ ಕಂಠಸಿರಿ, ಇಂಪಾದ ಹಿನ್ನೆಲೆ ಧ್ವನಿ ಯೊಂದಿಗೆ ಮನೆ ಮಾತಾಗಿರುವ ಟಿವಿ9 ನ ಖ್ಯಾತ ಯುವ ನಿರೂಪಕ ರಾಗಿರುವ ಕುಂದಾಪುರ ತಾಲೂಕಿನ ಗುಳ್ಳಾಡಿಯ ನಿತಿನ್ ಶೆಟ್ಟಿ ಯವರಿಗೆ TNIT ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ಸ್ 2024 ರಲ್ಲಿ ಅವರ ಹಿನ್ನೆಲೆ ಧ್ವನಿಗಾಗಿ ಬೆಸ್ಟ್ ವಾಯ್ಸ್ ಓವರ್ ಪ್ರಶಸ್ತಿ ಲಭಿಸಿದೆ.
ಇವರು ಮೂಲತಃ ಕುಂದಾಪುರದ ಬೇಳೂರು ಗ್ರಾಮದ ಗುಳ್ಳಾಡಿಯವರಾಗಿದ್ದು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಳ್ಳಾಡಿ ಮತ್ತು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಳ್ತೂರಿನಲ್ಲಿಯೂ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ವಿವೇಕ ಪದವಿ ಪೂರ್ವ ಕಾಲೇಜು ಕೋಟ ದಲ್ಲಿ ಮುಗಿಸಿ, ಬಿ.ಕಾಮ್(B.Com)ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿ, 90.4 ನಲ್ಲಿ ಪ್ರಥಮವಾಗಿ RJ ಯಾಗಿ ಸೇರಿ ನಂತರ ನಾನಾ ರೇಡಿಯೋ ಮತ್ತು ಲೋಕಲ್ ಟಿವಿ ಚಾನೆಲ್ ಗಳಲ್ಲಿ VJ ಯಾಗಿಯೂ ಕೆಲಸ ನಿರ್ವಹಿಸಿದ್ದರು.
ಕಸ್ತೂರಿ ನ್ಯೂಸ್, ರಾಜ್ ನ್ಯೂಸ್, ಪ್ರಜಾ ಟಿವಿ ಹಾಗೆ ಹತ್ತು ಹಲವು ಖಾಸಗಿ ಚಾನಲ್ ಗಳಲ್ಲಿ ಕೆಲಸ ನಿರ್ವಹಿಸಿದ್ದರು. ಖಾಸಗಿ ಸುದ್ದಿವಾಹಿನಿ ಯೊಂದರಲ್ಲಿ ಆದ ಅವಮಾನದಿಂದ ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ಈಗ ಪ್ರತಿಷ್ಠಿತ ಟಿವಿ9 ನ ಉದ್ಯೋಗಿ ಯಾಗಿರುವ ನಿತಿನ್ ಶೆಟ್ಟಿ ಯ ಜರ್ನಿ ಸುಲಭದ್ದಾಗಿರಲಿಲ್ಲ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ನಿತಿನ್ ಕುಂದಾಪುರದ ಬಗೆಗಿನ ತಮ್ಮ ಪ್ರೇಮವನ್ನು ಮರೆತಿಲ್ಲ. ಬೆಂಗಳೂರಿನಲ್ಲಿರುವ ತನ್ನೂರಿನವರಿಗೆ ಏನಾದರೂ ತೊಂದರೆಯಾದಾಗ ತಕ್ಷಣ ತಮ್ಮ ಸುದ್ದಿ ವಾಹಿನಿಯ ನೆರವಿನೊಂದಿಗೆ ಸಹಾಯ ಹಸ್ತ ಚಾಚುತ್ತಿರುವುದು ಶ್ಲಾಘನೀಯ.