ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕ್ರೈಸ್ತ ಸಮುದಾಯದವರು ಸಂದರ್ಶಿಸುವ ವೆಲಂಕಣಿ ಪೆಸ್ಟಿವಲ್ ಸೆಪ್ಟೆಂಬರ್ ನಲ್ಲಿ ನಡೆಯಲಿದ್ದು, ಕರಾವಳಿ ಕ್ರೈಸ್ತರಿಗಾಗಿ ಮಡಗಾಂವ್ ವೆಲಂಕಣಿ ನಡುವೆ ವಿಶೇಷ ರೈಲಿಗೆ ಕೋಟ ಶ್ರೀನಿವಾಸ್ ಪೂಜಾರಿಯವರು ಸೂಚನೆ ನೀಡಿದ್ದಾರೆ.
ಕುಂದಾಪುರ ರೈಲು ಸಮಿತಿಯ ಗಣೇಶ್ ಪುತ್ರನ್ ಮೂಲಕ ಕುಂದಾಪುರ ಭಾಗದ ಕ್ರೈಸ್ತ ಸಮುದಾಯದವರು ಮಾಡಿದ ಮನವಿಯನ್ನು ಪರಿಗಣಿಸಿದ ಸಂಸದರು ಕಳೆದ ವಾರ ನಡೆದ ಕೊಂಕಣ ರೈಲ್ವೆ ಆಡಳಿತ ನಿರ್ದೇಶಕರ ಜತೆ ನಡೆಸ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ಸೂಚನೆ ರವಾನಿಸಿದ್ದಾರೆ. ಸದ್ಯದಲ್ಲೇ ರೈಲಿನ ಘೋಷಣೆ ಹೊರ ಬರುವ ಸಾದ್ಯತೆ ಇದೆ.