ಕೋಟ- ಸತೀಶ್ ಕುಮಾರ್ ಕೆಮ್ಮಣ್ಣು ಅವರ ‘ಗಮಕ ಕಲಾಕುಸುಮ’ ಕೃತಿ ಬಿಡುಗಡೆ

0
733

ಕುಂದಾಪುರ ಮಿರರ್ ಸುದ್ದಿ…
ಕೋಟ:
ಸಂಗೀತ ಮತ್ತು ಸಾಹಿತ್ಯಗಳೆರಡು ಸರಸ್ವತಿ ದೇವಿಯ ಕುಚದ್ವಯಗಳು. ತಾಯಿಯೊಬ್ಬಳು ತನ್ನ ಮಗುವಿಗೆ ತನ್ನೆರಡುಸ್ಥನಗಳ ಹಾಲನ್ನು ಒಂದರ ನಂತರ ಮತ್ತೊಂದೆಂಬಂತೆ ಸರಿಸಮನಾಗಿ ಊಡಿಸುವಂತೆ ಗಮಕ ಕಲೆ ಸಂಗೀತವನ್ನೂ, ಜೊತೆಜೊತೆಯಲ್ಲಿ ಜ್ಞಾನವನ್ನು ನೀಡಬಲ್ಲುದು. ಕನ್ನಡ ಭಾಷೆಯ ವಿಫುಲ ಸಂಪತ್ತನ್ನು ಪಸರಿಸುವ ಗಮಕ ಕಲೆ ನಾಡಿನಾದ್ಯಂತ ಇನ್ನಷ್ಟು ವಿಸ್ತರಿಸಬೇಕು. ನಮ್ಮಲ್ಲಿ ಪುರಾಣ ಜ್ಞಾನವನ್ನು ಹೆಚ್ಚಿಸುವ ಶಕ್ತಿ ಗಮಕಕಲೆಗಿದೆ. ಇಂದು ಬಿಡುಗಡೆಗೊಂಡ ಗಮಕ ಕಲಾಕುಸುಮ ಕೃತಿಯು ಗಮಕದ ಕುರಿತಂತೆ ಪ್ರಾರಂಭಿಕ ಜ್ಞಾನವನ್ನು ನೀಡುವಲ್ಲಿ ಅತ್ಯಮೂಲ್ಯ ಕೃತಿಯಾಗಿದೆ. ಯುವ ಗಮಕಾಭ್ಯಾಸಿಗಳಿಗೆ ಈ ಕೃತಿ ಉತ್ತಮ ಪ್ರವೇಶಿಕೆಯಾಗಲಿದೆ” ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಖ್ತನ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಎಲ್. ಸಾಮಗ ಹೇಳಿದರು.

ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ಮತ್ತು ಕೋಟದ ಮಿತ್ರ ಮಂಡಳಿ ಇವರ ಸಹಯೋಗದಲ್ಲಿ ಕೋಟ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ ನವಂಬರ್ 20 ರಂದು ಆಯೋಜಿಸಿದ ಸತೀಶ್ ಕುಮಾರ್ ಕೆಮ್ಮಣ್ಣು ಅವರ ‘ಗಮಕ ಕಲಾಕುಸುಮ’ ಕೃತಿ ಬಿಡುಗಡೆ ಮಾಡಿ ಎಮ್. ಎಲ್. ಸಾಮಗ ಮಾತನಾಡಿದರು.

ಕುಂದಾಪುರ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಸುಜಯೀಂದ್ರ ಹಂದೆ ಎಚ್. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು, ಬದುಕಿನಲ್ಲಿ ಹವ್ಯಾಸಗಳು ನಮ್ಮ ಕೊನೆತನಕದ ಗೆಳೆಯರು, ಅನಾದಿಕಾಲದಿಂದಲೂ ಪ್ರಚಲಿತದಲ್ಲಿದ್ದ ಸಂಗೀತ ಮತ್ತು ಸಾಹಿತ್ಯವನ್ನೊಳಗೊಂಡ ಗಮಕಕಲೆ ನಮ್ಮ ಜೀವನದಲ್ಲಿ ಸದಾ ಉತ್ಸಾಹವನ್ನು ತುಂಬುತ್ತದೆ. ಸರಕಾರ ಗಮಕ ಕಲೆಯ ಉಳಿವು ಬೆಳವಣಿಗೆಗೆ ವಿಶೇಷ ಸಹಕಾರ ನೀಡಬೇಕಾದ ಅಗತ್ಯವಿದೆ, ಇಂದು ಬಿಡುಗಡೆ ಕಂಡ ಕೃತಿ ಹಲವರನ್ನು ತಲುಪಲಿ ಎಂದು ಹಾರೈಸಿದರು.

Click Here

ಮಿತ್ರ ಮಂಡಳಿಯ ಅಧ್ಯಕ್ಷ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಉಡುಪಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ ಯಾಮಿನಿ ಭಟ್ ಶುಭಾಶಂಸನೆಗೈದರು.

ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ಸ್ವಾಗತಿಸಿ ಪ್ರಸ್ಥಾವನೆಗೈದರು. ಕುಮಾರಿ ಕಾವ್ಯ ಹಂದೆ ಗಮಕ ಶೈಲಿಯಲ್ಲಿ ಪ್ರಾರ್ಥಿಸಿದರು. ಉಡುಪಿ ಜಿಲ್ಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ವಂದಿಸಿದರು. ಅಧ್ಯಾಪಕಿ ಮಹಾಲಕ್ಷ್ಮೀ ಸೋಮಯಾಜಿ ನಿರೂಪಿಸಿದರು.

ಗಮಕಿಗಳಾದ ಮಂಜುಳ ಸುಬ್ರಹ್ಮಣ್ಯ ಭಟ್ ಮಂಚಿ ಹಾಗೂ ಡಾ| ರಾಘವೇಂದ್ರ ರಾವ್ ಪಡುಬಿದ್ರಿ ಅವರಿಂದ ರನ್ನನ ಗದಾಯುದ್ಧದ ಆಯ್ದ ಪದ್ಯಗಳ ಗಮಕವಾಚನ ಕಾರ್ಯಕ್ರಮ ನೆರವೇರಿತು.

LEAVE A REPLY

Please enter your comment!
Please enter your name here