ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಎರಡು ದಿನಗಳ ಹಿಂದಷ್ಟೇ ಕ್ರೈಸ್ತರ ಪವಿತ್ರ ಯಾತ್ರಾ ಸ್ಥಳ ವೇಲಂಕಣಿಗೆ ಪ್ರಯಾಣಿಸಲು ವಿಶೇಷ ರೈಲು ಬೇಡಿಕೆ ನೀಡಿದ್ದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಲ್ಲಿಸಿದ್ದ ಮನವಿಗೆ ಕೊಂಕಣ ರೈಲ್ವೇ ಸ್ಪಂದಿಸಿದೆ.
ಕೋಟ ಮನವಿಗೆ ಪ್ರತಿಕ್ರಿಯಿಸಿರುವ ರೈಲ್ವೇ ಇಲಾಖೆ, ವೇಲಂಕಣಿ ಮಡಗಾಂವ್ ಮದ್ಯೆ ವಿಶೇಷ ರೈಲು ಪ್ರಯಾಣವನ್ನು ಅಧಿಕೃತವಾಗಿ ಘೋಷಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ವೇಲಾಂಕಣಿ ಪೆಸ್ಟಿವಲ್ (ಹೊಸ್ತು) ಗಾಗಿ ಕೊಂಕಣ ರೈಲ್ವೆ ವಿಶೇಷ ರೈಲಿನ ಪ್ರಕಟಣೆ ನೀಡಿದ್ದು, ಸೆಪ್ಟಂಬರ್ 6ರಂದು ಮಧ್ಯಾಹ್ನ 12 ಕ್ಕೆ ಮಡಗಾಂವ್ ಬಿಡುವ ರೈಲು ಸಂಜೆ 4.20 ಕ್ಕೆ ಕುಂದಾಪುರ ತಲುಪಿ ಮರುದಿನ ಅಂದರೆ ಸೆಪ್ಟಂಬರ್ 7ರಂದು ಮದ್ಯಾಹ್ನ 12 ಕ್ಕೆ ವೇಲಾಂಕಣಿ ತಲುಪಲಿದೆ. ಸೆಪ್ಟಂಬರ್ 7ರಂದು ರಾತ್ರಿ 11.50 ಕ್ಕೆ ವೇಲಂಕಣಿಯಿಂದ ಹೊರಟು ಸೆಪ್ಟಂಬರ್ 8ರಂದು ಸಂಜೆ 6.40 ಕ್ಕೆ ಕುಂದಾಪುರ ಮೂಲಕ ರಾತ್ರಿ 11 ಕ್ಕೆ ಮಡಗಾಂವ್ ತಲುಪಲಿದೆ ಎಂದು ರೈಲ್ವೇ ಪ್ರಕಟಣೆ ತಿಳಿಸಿದೆ.