ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಲಯನ್ ರೋವನ್ ಡಿ ಕೋಸ್ತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಫಲಾನುಭವಿಗಳಿಗೆ ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ಸೊತ್ತುಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ LCIF ಕೊ. ಆರ್ಡಿನೇಟರ್ ಲಯನ್ ಹರಿಪ್ರಸಾದ್ ರೈ ಮತ್ತು ಅತಿಥಿಗಳಾಗಿ ಜಿಲ್ಲಾ ಅಂಬಾಸಿಡರ್ ಲಯನ್ ಅರುಣ್ ಕುಮಾರ ಹೆಗ್ಡೆ ಆಗಮಿಸಿದ್ದು ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ದಾನಿಗಳ ಕೊಡುಗೆಗಳ ಕುರಿತು ಲಯನ್ ಪುನೀತ್ ಶೆಟ್ಟಿ ವಿವರಿಸಿದರು.
ಬಸ್ರೂರು ಬಿ.ಎಂ. ಶಾಲೆಗೆ 50 ಕುರ್ಚಿಗಳನ್ನು, ಕುಂದಾಪುರದ ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ, ಹಿರಿಯ ಪ್ರಾಥಮಿಕ ಶಾಲೆ ಬಿದ್ಕಲ್ ಕಟ್ಟೆಯ 75 ಮಕ್ಕಳಿಗೆ ಮತ್ತು ಬಡಾಕೆರೆ ಹಂಗಳೂರು ಶಾಲೆಯ 30 ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಅನಾರೋಗ್ಯ ಪೀಡಿತ ಹೋದ್ರಾಳಿ ಸರಸ್ವತಿ ಎಂಬವರಿಗೆ ಚಿಕಿತ್ಸೆ ಗಾಗಿ 10,000. ರೂಪಾಯಿ ನೀಡಲಾಯಿತು. ಡಯಾಬಿಟಿಸ್ ನಿಂದ ಕಾಲು ಕಳಕೊಂಡ ಹಂಗಳೂರಿನ ರೋಜಾರಿಯೋ ಡಿ ಸೋಜಾ ಅವರಿಗೆ ಕೃತಕ ಕಾಲಿಗಾಗಿ ರುಪಾಯಿ 30,000.ವನ್ನು ಲಯನ್ ಹರಿಪ್ರಸಾದ್ ರೈ ನೀಡಿದರು.
ಲಯನ್ ಮ್ಯಾಥ್ಯೂ ಜೋಸೆಫ್ ವರದಿ ವಾಚಿಸಿದರು. ಲಯನ್ ಹರಿಪ್ರಸಾದ್ ರೈ ಕ್ಲಬಿನಲ್ಲಿ ಹೊಸತಾಗಿ ಎಂ. ಜೆ.ಎಫ್. ಆದ ಲಯನ್ ಫಿಲಿಪ್ ಡಿ ಕೊಸ್ತ, ರೋವನ್ ಡಿ ಕೊಸ್ತ, ಲಯನ್ ಸುಂದರ ಶೆಟ್ಟಿ ಮತ್ತು ಲಯನ್ ರಜತ್ ಹೆಗ್ಡೆ ಯವರನ್ನು ಸನ್ಮಾನಿಸಿ LCIF ನ ವಿಶ್ವವ್ಯಾಪಿ ಪ್ರಯೋಜನ ಕುರಿತು ಅರಿವು ಮೂಡಿಸಿದರು.
ಲಯನ್ ಅರುಣಕುಮಾರ ಹೆಗ್ಡೆಯವರು ಕ್ಲಬ್ ನ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶುಭಾಶಂಸನೆಗೈದ ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ದಾನಿಗಳ ಸೇವೆಯನ್ನು ಗುರುತಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಮತ್ತು ಅಧ್ಯಕ್ಷರು ತನ್ನ ಕೇವಲ ಒಂದು ತಿಂಗಳ ಅಧಿಕಾರ ಅವಧಿಯಲ್ಲಿ ಕೈಕೊಂಡ ಸೇವಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ಕ್ಲಬ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರಲ್ಲಿ ಸಂಶಯವಿಲ್ಲ ಎಂದರು.
ಲಯನ್ ರೀಟಾ ಕ್ವಾಡ್ರಸ್ ವಂದಿಸಿದರು. ಲಯನ್ ರಜನಿ ಮ್ಯಾಥ್ಯೂ ಕಾರ್ಯಕ್ರಮ ನಿರೂಪಿಸಿದರು.