ಹಂಗ್ಳೂರು ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ದೇಶ ಭಕ್ತಿಗೀತೆ ಸ್ಪರ್ಧೆ

0
42

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :78ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ರೋವನ್ ಡಿ’ ಕೋಸ್ತ ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ವಲಯದ ನಿವೃತ್ತ ಶಿಕ್ಷಣಾಧಿಕಾರಿಗಳಾದ ಗೋಪಾಲ ಶೆಟ್ಟಿಯವರು ಕಾರ್ಯಕ್ರಮವ ನ್ನು ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಹೆಚ್ಚು ನಡೆಯಬೇಕು ಮತ್ತು ಇದರಿಂದ ಮಕ್ಕಳಿಗೆ ದೇಶ ಭಕ್ತಿ ಬೆಳೆದು ಅದರ ಬಗ್ಗೆ ಅರಿವು ಮೂಡುವುದು ಎಂದರು.

ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ ಹಿರಿಯ ಹಾಗೂ ಕಿರಿಯರ ವಿಭಾಗಗಳಿಂದ 74 ವಿದ್ಯಾರ್ಥಿಗಳು ಭಾಗಹಿಸಿದ್ದರು.

ಹಿರಿಯರ ವಿಭಾಗದಲ್ಲಿ ಆಕಾಂಕ್ಷಾ ಪೈ, ನವಮಿ ಭಟ್ ಮತ್ತು ಮಹಮದ್ ಇಪ್ರಿಯಾಝ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರೆ, ಕಿರಿಯರ ವಿಭಾಗದಲ್ಲಿ ಗೀತಾ ನಾಯಕ್, ರಿಷಿಕಾ ಮೂಡ್ಲ ಕಟ್ಟೆ, ಮತ್ತು ಆವನಿ
ಶಾನ್ ಭಾಗ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.

Click Here

ತೀರ್ಪುಗಾರರಾಗಿ ಅಶೋಕ್ ಸಾರಂಗ, ಅನುರಾಧ ಭಟ್, ಅರ್ಚನಾ ಉಪಾಧ್ಯ, ಅಪೂರ್ವ ಅವಭೃತ, ಲಯನ್ ಜಯಶೀಲ ಕಾಮತ್ ಮತ್ತು ಲಯನ್ ಗ್ರೇಟ್ಟ ಡಿ’ ಕೋಸ್ತ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ, ದ್ವೀತಿಯ ಉಪ ರಾಜ್ಯಪಾಲ ಲಯನ್ ರಾಜೀವ್ ಕೋಟ್ಯಾನ್, ಲಯನ್ ಜಿಲ್ಲಾ ಅಂಬಾಸಿಡರ್ ಲಯನ್ ಅರುಣ ಕುಮಾರ್ ಹೆಗ್ಡೆ ,ಜಿಲ್ಲಾ ತರಬೇತುದಾರ ಲಯನ್ ರಮಾನಂದ, ಲಯನ್ ಫಿಲಿಪ್ ಡಿ ಕೊಸ್ತ, ಲಯನ್ ಸುಧಾಕರ್ ಶೆಟ್ಟಿ ಲಯನ್ ಮ್ಯಾಥ್ಯೂ ಜೋಸೆಫ್ ಮತ್ತು ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕರಾಗಿ ಸಹಕಾರ ನೀಡಿದ ಲಯನ್ ಅನುಷಾ ಡಿ’ ಕೊಸ್ತರನ್ನು ಗೌರವಿಸಲಾಯಿತು. ಲಯನ್ ಶಾಂತಿ ಬರೆಟ್ಟೋ ಕಾರ್ಯಕ್ರಮ ನಿರೂಪಿಸಿದರು. ಲಯನ್ ಪುನೀತ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here