ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ವತಿಯಿಂದ ಉಚಿತ ಕನ್ನಡಕ ವಿತರಣೆ

0
207

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್(ರಿ.) ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಸೆ.3ರಂದು ಮಲ್ನಾಡ್ ಟೈಲ್ಸ್ ಆಫೀಸ್ ಮೊಳಹಳ್ಳಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಶಿಬಿರಾರ್ಥಿಗಳಿಗೆ ಕನ್ನಡಕ ಹಸ್ತಾಂತರ ಮೂಲಕ ಉದ್ಘಾಟಿಸಿ ಮಾತನಾಡಿದ ಟ್ರಸ್ಟ್ ನ ಪ್ರವರ್ತಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ ದೇಹದಲ್ಲಿ ಬಹಳ ಮುಖ್ಯ ಅಂಗ ಕಣ್ಣು ಅದು ಬಲ ಕಳೆದುಕೊಂಡಾಗ ಅದಕ್ಕೆ ಪುನರ್ ಜೀವ ತುಂಬುವುದು ಕನ್ನಡಕ, ನಮ್ಮ ಸಂಸ್ಥೆ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ 146 ಮಂದಿಗೆ ದೃಷ್ಟಿ ದೋಷ ಪತ್ತೆ ಹಚ್ಚಿ ಅವರಿಗೆ ಕಣ್ಣಿನ ವೈದ್ಯರು ಬಳಸಲು ಅನುಮೋದಿಸಿದ ಕನ್ನಡಕವನ್ನು ಉಚಿತವಾಗಿ ನೀಡುತ್ತಿದ್ದು ಅದರ ಪ್ರಯೋಜನ ಪಡೆಯಬೇಕಾಗಿ ಕೇಳಿಕೊಂಡರು.

Click Here

Click Here

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ದೀಪಿಕಾ ಡಿ. ಹೆಗ್ಡೆ, ಮೊಳಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚೈತ್ರ ಅಡಪಾ, ವಾಣಿ ಶೆಟ್ಟಿ, ಪ್ರಸಾದ್ ಆಸ್ಪತ್ರೆ ಸಿಬ್ಬಂದಿ ಮೋಹನ್ ಉಪಸ್ಥಿತರಿದ್ದರು.

ಟ್ರಸ್ಟ್ ನ ಯೋಜನಾಧಿಕಾರಿ ಗಿರೀಶ್ ಎಂ. ಎನ್. ಸ್ವಾಗತಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here