ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಆಲೂರಿಗೆ ಡಾ| ರಾಜೇಶ್ ಬಾಯರಿ ಅವರು ಚಿತ್ರಕೂಟದ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಕಂಡ ಕನಸನ್ನು ನನಸಾಗಿದ್ದಾರೆ. ಇದು ಅವರ ಯಶಸ್ಸು ಮಾತ್ರವಲ್ಲ. ಊರಿನವರ ಯಶಸ್ಸು ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಗುರುವಾರ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಪಾರ್ಶ್ವವಾಯು ಪುನರ್ವಸತಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಗುರು ಡಾ| ರಘುರಾಮ ಶಾಸ್ತ್ರಿ, ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಕುಂದಾಪುರದ ಉದ್ಯಮಿ ಅಭಿನಂದನ್ ಶೆಟ್ಟಿ, ನಗರದ ವ್ಯಾಮೋಹ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿಯೂ ಡಾ| ಬಾಯರಿಯವರು ತನ್ನೂರಿನಲ್ಲಿಯೇ ಆಯುರ್ವೇದ ಸಂಸ್ಥೆ ಸ್ಥಾಪಿಸಿ, ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಖುಷಿಯ ವಿಚಾರ. ಚಿತ್ರಕೂಟದ ಮೂಲಕ ಆಲೂರು, ಚಿತ್ತೂರು ಗ್ರಾಮಗಳು ಎಲ್ಲೆಡೆ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಉಡುಪಿ ಎಸ್‌ಡಿಎಂಸಿ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ನಾಗರಾಜ್ ಪೂಜಾರಿ ಮಾತನಾಡಿದರು.
ಕಾಸ್ಮೆಟಿಕ್ ವಿಭಾಗವನ್ನು ಆಲೂರು ಗ್ರಾ.ಪಂ. ಅಧ್ಯಕ್ಷ ರಾಜೇಶ್ ದೇವಾಡಿಗ ಉದ್ಘಾಟಿಸಿದರು. ಮಹಾಬಲ ಬಾಯರಿ ಉಪಸ್ಥಿತರಿದ್ದರು.
ಚಿಕಿತ್ಸಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ| ರಾಜೇಶ್ ಬಾಯರಿ ಪ್ರಸ್ತಾವಿಸಿ, ಚಿತ್ರಕೂಟದಲ್ಲಿನ ಚಿಕಿತ್ಸಾ ಪದ್ಧತಿ, ಸಂಸ್ಥೆ ನಡೆದು ಬಂದ ಹಾದಿ, ಹೊಸದಾಗಿ ಆರಂಭವಾದ ಪಾರ್ಶ್ವವಾಯು ಚಿಕಿತ್ಸೆ, ಕಾಸ್ಮೆಟಿಕ್ ವಿಭಾಗದ ಕುರಿತಂತೆ ಮಾಹಿತಿ ನೀಡಿದರು.
ಸ್ಥಳೀಯ ಶಾಲಾ ಶಿಕ್ಷಕಿ ಶ್ರೀಮತಿ ಜಿ. ಹೆಗ್ಗಡೆ ಅವರನ್ನು ಸಮ್ಮಾನಿಸಲಾಯಿತು.
ಆದ್ಯಾ ಬಾಯರಿ ಪರಿಚಯಿಸಿ, ಡಾ| ಅನುಲೇಖ ಬಾಯರಿ ವಂದಿಸಿದರು. ಭಾಗ್ಯಶ್ರೀ ಐತಾಳ್ ಕಾರ್‍ಯಕ್ರಮ ನಿರೂಪಿಸಿದರು.