ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಎಕ್ಸಲೆಂಟ್ ಕುಂದಾಪುರ ವಿದ್ಯಾಸಂಸ್ಥೆಯು ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನದೇ ಆಗಿರುವ ಹೊಸ ಚಾಪನ್ನು ಮೂಡಿಸಿಕೊಂಡು ಬಂದು ಕೇವಲ ತಾಲೂಕು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ಆಂತರ್‌ರಾಜ್ಯ ಮಟ್ಟದಲ್ಲೂ ಸಹ ತನ್ನ ವಿಜಯ ಪತಾಕೆಯನ್ನು ಹಾರಿಸಿದೆ. ಶಿವಮೊಗ್ಗದಲ್ಲಿ ನಡೆದಂತ ಅಂತರ್‌ರಾಜ್ಯ ಮಟ್ಟದ (ರಾಷ್ಟ್ರೀಯ) ಕರಾಟೆ ಸ್ಪರ್ಧೆಯಲ್ಲಿ ಕಾಟ ವಿಭಾಗದಲ್ಲಿ ರಾಷ್ಟ್ರಕ್ಕೆ ದ್ವಿತೀಯ ಸ್ಥಾನವನ್ನು ಎಕ್ಸಲೆಂಟ್ ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಅನೀಶ್ ಆರ್ ಶೆಟ್ಟಿ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇವರು ಹಾಲಾಡಿ ರಮೇಶ್ ಶೆಟ್ಟಿ ಮತ್ತು ರಜನಿ ಆರ್ ಶೆಟ್ಟಿ ರವರ ಪುತ್ರರಾಗಿದ್ದಾರೆ.
ಇವರ ತರಬೇತುದಾರರಾಗಿ ಅಬ್ಬಲ್ ಕೆ.ಡಿ.ಎಫ್ ಕುಂದಾಪುರ ಇವರ ಮಾರ್ಗದರ್ಶನದಲ್ಲಿ ಬಹುಮಾನ ಪಡೆದಿರುತ್ತಾರೆ. ಇವರ ಸಾಧನೆಯನ್ನು ಎಮ್. ಎಮ್ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಮ್ ಮಹೇಶ್ ಹೆಗ್ಡೆ ಹಾಗೂ ಕಾರ್ಯದರ್ಶಿಯಾದ ದೀಪಾ ಎಮ್ ಹೆಗ್ಡೆ, ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯೋಪಾಧ್ಯಾಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿ ವರ್ಗದವರು ಅಭಿನಂದಿಸಿದ್ದಾರೆ.